9:53 AM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಐದನೇ ವರ್ಷಕ್ಕೆ ಕಾಲಿಟ್ಟಿತು ತುಳು ವಿಕಿಪೀಡಿಯ : ಇಂದು ಸಂಜೆ  ಐನನೆ ವಡ್ಯಂತಿನ ಐಸ್ರೊ ವಿಡಿಯೋ ಮೀಟ್

August 5, 2020, 8:20 PM

ಮಂಗಳೂರು(ರಿಪೋರ್ಟರ್ ಕರ್ನಾಟಕ)


ದ್ರಾವಿಡ ಭಾರತದಲ್ಲಿ ಪ್ರಾಚೀನ ಹಾಗೂ ಅತಿ ಹೆಚ್ಚು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿರುವ ತುಳು ಭಾಷೆಯನ್ನು ಅದರೊಳಗಿನ ಸಾರವನ್ನು ಜಗದಗಲಕ್ಕೆ ಪಸರಿಸುವ ನಿಟ್ಟಿನಲ್ಲಿ ಜಿಜ್ಞಾಸುಗಳಿಗೆ ಸಹಾಯವಾಗುವ ದಿಸೆಯಲ್ಲಿ ಆರಂಭವಾದ ತುಳು ವಿಕಿಪೀಡಿಯ ಆ.6 ರಂದು ತನ್ನ ನಾಲ್ಕನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ.


ತುಳು ವಿಕಿಪೀಡಿಯ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಅಂಗವಾಗಿ ಆ.6ರ ಸಂಜೆ 4.15ರಿಂದ 5.30ರ ವರೆಗೆ ತುಳು ವಿಕಿಪೀಡಿಯ ಪುಟ್ಟುದು ಐನನೆ ವಡ್ಯಂತಿನ ಐಸ್ರೊ ಎನ್ನುವ ವಿಡಿಯೋ ಮೀಟ್ ಗೆಜೆಟ್ ಲೋಕ ಎನ್ನುವ ಯೂಟ್ಯೂಬ್ ಚಾನೆಲ್ ಮೂಲಕ ನಡೆಯಲಿದೆ.
ತುಳು ಹಿರಿಯ ವಿಧ್ವಾಂಸರು ಲೇಖಕರೂ ಆದ ಡಾ.ಅಮೃತ ಸೋಮೇಶ್ವರ ಹಾಗೂ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಪುರುಷೋತ್ತಮ ಬಿಳಿಮಳೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಹಿರಿಯ ವಿಧ್ವಾಂಸ ಡಾ.ಬಿ.ಎ.ವಿವೇಕ್ ರೈ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.

2016ರ ಇದೇ ದಿನ(ಆ.6) ತುಳು ವಿಕಿಪೀಡಿಯವೂ ಜಾಗತಿಕವಾಗಿ ಬಿಡುಗಡೆ(ಲೈವ್) ಆಗಿತ್ತು. ಅದಕ್ಕಿಂತಲೂ ಮೊದಲು ಈ ಕುರಿತ ಕೆಲಸ ಕಾರ್ಯಗಳು ನಡೆಯುತ್ತಿತ್ತು. ಅಲ್ಲಿ ತನಕ ಸತತ ಎಂಟು ವರ್ಷ ಇಂಕ್ಯುಬೇಟರ್ ಸ್ಟೇಜ್‌ನಲ್ಲಿದ್ದ ತುಳು ವಿಕಿಪೀಡಿಯದ ಬಗ್ಗೆ ನಿಜವಾದ ಕೆಲಸ ಆರಂಭವಾಗಿದ್ದು 2014 ರಿಂದ. 2016ರಲ್ಲಿ ಪಂಜಾಬಿನ ಛಂಢೀಘಡದಲ್ಲಿ ನಡೆದ ಸಮಾವೇಶದಲ್ಲಿ ‌ಬಿಡುಗಡೆಗೊಂಡ ತುಳು ವಿಕೀಪೀಡಿಯ ಉತ್ತಮ ಮಾಹಿತಿಕೋಶವಾಗಿ ಬೆಳೆಯುತ್ತಾ ಇದೆ.


ತುಳು ವಿಕಿಪೀಡಿಯದ ನಿರ್ವಾಹಕರು ಆದ ಯು.ಬಿ.ಪವನಜ, ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಮುಖ್ಯಸ್ಥರಾದ ಡಾ.ವಿಶ್ವನಾಥ ಬದಿಕಾನ, ಖಜಾಂಚಿ ಡಾ.ಕಿಶೋರ್ ಕುಮಾರ್ ರೈ ಶೇಣಿ ಹಾಗೂ ಸದಸ್ಯರಾಗಿರುವ ಭರತೇಶ್ ಅಲಸಂಡೆ ಮಜಲು ಸದ್ಯ ತುಳು ವಿಕಿಪೀಡಿಯದ ಕುರಿತಾಗಿ ಕೆಲಸವನ್ನು ಮಾಡುತ್ತಾ ಇದ್ದಾರೆ.

1382 ಕ್ಕೂ ಹೆಚ್ಚು ಲೇಖನಗಳು
ತುಳು ವಿಕಿಪೀಡಿಯ ಸಂಗ್ರಹದಲ್ಲಿ ಸುಮಾರು 1382 ಲೇಖನಗಳು ಸದ್ಯ ಲಭ್ಯವಿದ್ದು ವರ್ಷದಿಂದ ವರ್ಷಕ್ಕೆ ಲೇಖನಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಬರೆಯುವವರ ಸಂಖ್ಯೆ ಮಾತ್ರ ಹೇಳುವಷ್ಟು ಹೆಚ್ಚಾಗಿಲ್ಲ ಎನ್ನುವುದು ಭರತೇಶ ಅಲಸಂಡೆಮಜಲು ಅವರ ಮಾತು. ಸದ್ಯ 34 ಸಕ್ರಿಯ ಬರಹಗಾರರು ಇದ್ದಾರೆ ಇನ್ನೂ ಹೆಚ್ಚಿನ ಜನ ಇದರ ಒಲವು ಬೆಳೆಸಿಕೊಂಡರೆ ಅಧಿಕ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ. ಇನ್ನಷ್ಟು ಹೆಚ್ಚಿನ ಯುವಕರೂ ತುಳು ವಿಕಿಪೀಡಿಯದಲ್ಲಿ ಭಾಗವಹಿಸುವಂತಾಗಲಿ ಎನ್ನುತ್ತಾರೆ ಅವರು.

ಕಾರ್ಯಕ್ರಮ ನೋಡಲು ಕೆಳಗಿನ ಬಟನ್ ಪ್ರೆಸ್ ಮಾಡಿ

ಇತ್ತೀಚಿನ ಸುದ್ದಿ

ಜಾಹೀರಾತು