ಇತ್ತೀಚಿನ ಸುದ್ದಿ
ಆರ್ ಬಿಐ ಹಣಕಾಸು ನೀತಿ ಸಮಿತಿಗೆ ತುಳುವ ಮುಂಡಾಜೆಯ ಶಶಾಂಕ್ ಭಿಡೆ ನೇಮಕ
October 6, 2020, 9:34 PM

ನವದೆಹಲಿ( reporterkarnataka news): ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ)ದ ಹಣಕಾಸು ನೀತಿ ಸಮಿತಿ(ಎಂಪಿಸಿ) ನೂತನ ಸದಸ್ಯರಾಗಿ ಜಿಲ್ಲೆಯ ಬೆಳ್ತಂಡಿಯ ಮುಂಡಾಜೆಯವರಾದ ಶಶಾಂಕ್ ಭಿಡೆ ಸೇರಿದಂತೆ ಮೂವರನ್ನು ನೇಮಕ ಮಾಡಲಾಗಿದೆ.
ಅರ್ಥಶಾಸ್ತ್ರಜ್ಞರಾದ ಅಶಿಮಾ ಗೋಯಲ್, ಜಯಂತ್ ಆರ್. ವರ್ಮಾ ಹಾಗೂ ಭಿಡೆ ಅವರ ನೇಮಕ ಕುರಿತು ಕೇಂದ್ರ ಸರಕಾರ ಗಜೆಟ್ ಅಧಿಸೂಚನೆ ಹೊರಡಿಸಿದೆ. ಈ ಮೂವರು ಸದಸ್ಯರು ನಾಲ್ಕು ವರ್ಷಗಳ ಕಾಲ ಸಮಿತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿದ್ದಾರೆ.
ನೂತನ ಸದಸ್ಯರಲ್ಲಿ ಒಬ್ಬರಾದ ಭಿಡೆ ಅವರು ಮುಂಡಾಜೆಯಲ್ಲಿ ಜನಿಸಿದರು. ಮುಂಡಾಜೆ ಹಾಗೂ ಉಜಿರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಬೆಂಗಳೂರಿನಲ್ಲಿ ಕೃಷಿಯಲ್ಲಿ ಬಿಎಸ್ಸಿ ಪದವಿ ಪಡೆದರು. ದೆಹಲಿಯಲ್ಲಿ ಎಂಎಸ್ಸಿ ಮಾಡಿದರು. ಅಮೆರಿಕಾದಲ್ಲಿ ಕೃಷಿ ಅರ್ಥ ಶಾಸ್ತ್ರದಲ್ಲಿ ಪಿಎಚ್ ಡಿ ಗಳಿಸಿದರು.