12:32 AM Thursday3 - December 2020
ಬ್ರೇಕಿಂಗ್ ನ್ಯೂಸ್
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ

ಇತ್ತೀಚಿನ ಸುದ್ದಿ

ತುಳುನಾಡ ತುತ್ತೈತ ಜೋಕುಲೆನ ಭಾವಚಿತ್ರ ಪಂಥದ ಪ್ರಶಸ್ತಿ ಪ್ರದಾನ : ಮಾ.ಕಾರ್ತಿಕ್ ಕಾರ್ಕಳಗೆ ‘ತುಳುವ ಕುರಲ್’ ಬಿರುದು

November 22, 2020, 8:05 AM

ಮಂಗಳೂರು (Reporter Karnataka News)

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ, ರೋಟರಿ ಕ್ಲಬ್ ಮೂಲ್ಕಿ ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತುಳುನಾಡ ತುತ್ತೈತ ಜೋಕುಲೆನ ಭಾವಚಿತ್ರ ಪಂಥದ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಉರ್ವ ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಿತು.

ಈ ಸಂದರ್ಭ ಕೊರಗಜ್ಜನ ಹಾಡಿನ ಮೂಲಕ ಜನರ ಮನಗೆದ್ದ ಮಾ.ಕಾರ್ತಿಕ್ ಕಾರ್ಕಳ ಅವರಿಗೆ ಅಕಾಡೆಮಿ ವತಿಯಿಂದ ‘ತುಳುವ ಕುರಲ್’ ಬಿರುದು ನೀಡಲಾಯಿತು. ಈ ಸಂದರ್ಭ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಗುವಿನ ಆರೋಗ್ಯ ಸುಧಾರಣೆಗೆ ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದ್ದಾರೆ. ರೋ.ರಂಗನಾಥ್ ಭಟ್ ರೋಟರಿ ಪರವಾಗಿ 25 ಸಾವಿರ ನೆರವನ್ನು ಘೋಷಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ, ದೇವರು ಮನಸ್ಸು ಮಾಡಿದರೆ ಬೇಯಿಸಿದ ಭತ್ತ ಮೊಳಕೆಯೊಡೆಯುತ್ತದೆ ಹಾಗೆಯೆ ಆರೋಗ್ಯ ಸ್ಥಿತಿ ಸರಿ ಇರದೇ ಇದ್ದರೂ ಅಮೋಘ ಕಂಠದಿಂದ ತುಳುನಾಡಿನಾದ್ಯಂತ ಕಾರ್ತಿಕ್‌ನ ಹೆಸರು ಜನಜನಿತವಾಗಿದೆ. ನಿಜವಾದ ನಿಷ್ಕಪಟ ಭಾವನೆಗಳೇ ಇದಕ್ಕೆಲ್ಲ ಕಾರಣ ಎಂದರು.

ಪ್ರತಿಭಾನ್ವಿತ ಬಾಲನಟ ಅಚಿಂತ್ಯಾ ಪುರಾಣಿಕ್ ಅವರನ್ನೂ ಈ ಸಂದರ್ಭ ಸನ್ಮಾನಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿಶೇಷ ಚೇತನ ಮಗು ಪ್ರಾರ್ಥನ್, ಅಜ್ಜಿಯ ವೇಷ ಹಾಕಿದ್ದ ಜ್ಞಾನಿಕ ಪಿ.ಎಸ್.ಕರ್ಕೇರ ಅವರನ್ನು ಗೌರವಿಸಲಾಯಿತು.

ಬಹುಮಾನ ವಿಜೇತ ಮಕ್ಕಳು

ಪ್ರಥಮ ಬಹುಮಾನ ಲತೀಶ್ ಎಚ್.ಕುಮಾರ್, ದ್ವಿತೀಯ ಬಹುಮಾನ ಯುಕ್ತಿ ಎನ್.ಪ್ರಸಾದ್, ತೃತೀಯ ಬಹುಮಾನ ಜಶ್ವಿ ಆರ್.ಕುಲಾಲ್, ನಾಲ್ಕನೆ ಬಹುಮಾನ ಅದಿತ್ರಿ ಬೆಳುವಾಯಿ, ಐದನೇ ಬಹುಮಾನ ಮೋಕ್ಷಿತಾ ಪಿ.ಎನ್., ಅರನೇ ಬಹುಮಾನ ಸಾಕ್ಷಿ, ಎಳನೇ ಬಹುಮಾನ ಕೆ.ಶೌರ್ಯ ಬಿ.ಕಾಮತ್, ಎಂಟನೇ ಪ್ರಶಸ್ತಿ ಇಶಾನ್ ಭಟ್,

ಟೈಮ್ಸ್ ಆಫ್ ಕುಡ್ಲ ಪ್ರಧಾನ ಸಂಪಾದಕ ಎಸ್.ಆರ್.ಬಂಡಿಮಾರ್, ಸಂತೋಷ್ ದೇವಾಡಿಗ, ರಜನಿ ರಂಗನಾಥ್ ಭಟ್, ರೊ.ಬಾಲಕೃಷ್ಣ ಕಳ್ಳಿಗೆ, ರೋ.ಎಂ.ನಾರಾಯಣ್, ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಅಕಾಡೆಮಿ ಸದಸ್ಯ ಕಡಬ ದಿನೇಶ್ ರೈ, ಸಂತೋಷ್ ಪೂಜಾರಿ ಕಾರ್ಕಳ, ಚೇತಕ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.

ಸಮೃದ್ಧಿ, ರಕ್ಷಾ ಪ್ರಾರ್ಥಿಸಿದರು. ರೋ.ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನರೇಂದ್ರ ಕೆರೆಕಾಡು ನಿರೂಪಿಸಿದರು. ಸ್ಪರ್ಧೆಯಲ್ಲಿ 84 ಮಕ್ಕಳು ಭಾಗವಹಿಸಿದ್ದರು.

ಹಿರಿಯ ಪತ್ರಕರ್ತ ಯಶೋಧರ ಕೋಟ್ಯಾನ್, ನೀಮಾ ಹಳೆಯಂಗಡಿ, ಭಾಗ್ಯವಾನ್ ಸನಿಲ್, ವಿಜಯಲಕ್ಷ್ಮೀ ಬಂಟ್ವಾಳ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು