11:17 AM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

10 ವಿಶೇಷ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಸಿದ್ದತೆ

September 4, 2020, 10:01 AM

ಬೆಂಗಳೂರು(reporterkarnataka news): ಕೇಂದ್ರ ಸರಕಾರ ಅನ್ ಲಾಕ್ 4.0 ಜಾರಿಗೊಳಿಸಿದ ಬಳಿಕ ಭಾರತೀಯ ರೈಲ್ವೆ ಇಲಾಖೆಯು ರಾಜ್ಯದಿಂದ ದೇಶದ ವಿವಿಧ ಕಡೆಗಳಿಗೆ 10 ವಿಶೇಷ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಸಿದ್ಧತೆ ನಡೆದಿದೆ.

ಭಾರತೀಯ ರೈಲ್ವೆ ವಲಯದ ನೈಋತ್ಯ ವಿಭಾಗದಲ್ಲಿ ಸುಮಾರು ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಕಾರ್ಯಾರಂಭ ಮಾಡಲು ಈಗಾಗಲೇ ಸಿದ್ಧಗೊಂಡಿವೆ. ರೈಲು ಗಾಡಿ ಸಂಖ್ಯೆ 06587/06588 ಯಶವಂತಪುರ ದಿಂದ ಬಿಕಾನೇರ್ ವಾರಕ್ಕೊಮ್ಮೆ ಸಂಚರಿಸಲಿದೆ.

ಗಾಡಿ ಸಂಖ್ಯೆ 06535/36 ರೈಲು ಮೈಸೂರು-ಸೊಲ್ಲಾಪೂರ ಮಧ್ಯೆ ಪ್ರತಿದಿನವೂ ಸಂಚರಿಸಲಿವೆ. 02253/02254 ರೈಲು ಯಶವಂತಪುರ ಹಾಗೂ ಬಿಜಾಪುರ ಮಧ್ಯೆ ವಾರಕ್ಕೊಮ್ಮೆ ಸಂಚಾರ ನಡೆಸಲಿವೆ. 02627/02628 ಬೆಂಗಳೂರು-ದೆಹಲಿ ಮಧ್ಯೆದಲ್ಲಿ ದಿನವೂ ಸಂಚಾರ ನಡೆಸಲಿವೆ. ಇನ್ನೂ 06539/40 ರೈಲು ಬೆಂಗಳೂರು ಮತ್ತು ಮೈಸೂರು ಮಧ್ಯೆ ಭಾನುವಾರ ಹೊರತು ಪಡಿಸಿ ವಾರದ ಆರು ದಿನದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೇಡಿಕೆ ಹಾಗೂ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ರೈಲುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆ ಈಗಾಗಲೇ ತಿಳಿಸಿದೆ.

ಅನ್‍ಲಾಕ್ 4 ಜಾರಿಯಾದ ಬಳಿಕ ಗೃಹ ಸಚಿವಾಲಯ ವಿಶೇಷ ರೈಲು ಸಂಚಾರ ಆರಂಭಿಸಲು ಅನುಮತಿ ನೀಡಿತ್ತು. ಸುಮಾರು 100 ಹೆಚ್ಚು ವಿಶೇಷ ರೈಲುಗಳು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲೂ ಸಂಚಾರ ಮಾಡಲಿದೆ. 

ಇತ್ತೀಚಿನ ಸುದ್ದಿ

ಜಾಹೀರಾತು