ಇತ್ತೀಚಿನ ಸುದ್ದಿ
ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗ ಡ್ರೋನ್ಸರ್ವೇಗೆ ಆದೇಶ: ಅನುದಾನ ಬಿಡುಗಡೆ
October 8, 2020, 11:11 PM

ಸಿದ್ದಾಪುರ(reporterkarnataka news): ತಾಳಗುಪ್ಪಾದಿಂದ ಸಿದ್ದಾಪುರ-ಶಿರಸಿ- ಮುಂಡಗೋಡ-ತಡಸ್ ಮಾರ್ಗವಾಗಿ ಹುಬ್ಬಳ್ಳಿಯವರೆಗೆ ರೈಲ್ವೇ ಮಾರ್ಗ ವಿಸ್ತರಿಸುವ ಕುರಿತು ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದ ದಿ. ಸುರೇಶ ಅಂಗಡಿಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲ್ಲಿಸಿದ್ದ ಪ್ರಸ್ತಾವನೆಯನ್ವಯ ಈ ಮಾರ್ಗದ ಪಿಇಟಿ ಸರ್ವೇ ಕಾರ್ಯಕ್ಕೆ ಆದೇಶಿಸಿ ಅನುದಾನ ಬಿಡುಗಡೆಯಾಗಿದೆ.
ಸುಧಾರಿತ ತಂತ್ರಜ್ಞಾನ ಆಧಾರಿತ ಡ್ರೋನ್ ಸರ್ವೇ ಕಾರ್ಯ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗುತ್ತದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ.