ಇತ್ತೀಚಿನ ಸುದ್ದಿ
ಟೂರಿಸಂ ಮೇಲೆ ಕೋವಿಡ್ ನಕರಾತ್ಮ ಪರಿಣಾಮ : ಜಿಲ್ಲಾಧಿಕಾರಿ
September 27, 2020, 5:09 PM

ಮಂಗಳೂರು(reporterKarnatakanews)
ವಿಶ್ವ ದಿನಾಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಟೂರಿಸಂ ಡೇ ತಣ್ಣೀರುಬಾವಿ ಬೀಚ್ ನಲ್ಲಿ ನಡೆಯಿತು.


ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನು ಕರೆದು ಗಿಡಕ್ಕೆ ನೀರು ಹಾಕಿಸುವ ಮೂಲಕ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಸಂದೇಶವನ್ನು ನೀಡಿದ್ರು.

ಇದೇ ವೇಳೆ ಮಾತನಾಡಿದ ಅವರು, ಕೋವಿಡ್ ಬಂದ ನಂತರ ನಮ್ಮ ಜೀವನ ಶೈಲಿ ಮೇಲೆ ಪರಿಣಾಮ ಬೀರಿದೆ. ಟೂರಿಸಂನಿಂದ ಜಿಡಿಪಿ ಜಾಸ್ತಿ ಇರುತ್ತದೆ. ಆದರೆ ಕೋವಿಡ್ ನಿಂದ ನಕಾರಾತ್ಮಕ ಪರಿಣಾಮ ಟೂರಿಸಂ ಮೇಲೆ ಬೀರಿದೆ.

ಕೋವಿಡ್ ಬಂದ ನಂತರ ಜನರ ಮನೋಭಾವದಲ್ಲಿ ಬದಲಾವಣೆ ಆಗಿದೆ. ಪ್ರವಾಸಿ ತಾಣಗಳ ಸ್ಥಿತಿಗಳು ಬದಲಾಗಿವೆ. ನಮ್ಮಲ್ಲಿ ಅನೇಕ ಸಾಂಪ್ರಾದಾಯಿಕವಾದ ಕಲೆಗಳು ಇವೆ. ಅದ್ರಲ್ಲಿ ಕೆಲವು ಅಳಿವಿನಂಚಿನಲ್ಲಿದೆ. ಅದಕ್ಕೆ ಜೀವ ಕೊಡುವ, ಅಂತಹ ಕಲೆಗಳನ್ನು ಅಭಿವೃದ್ಧಿಪಡಿಸೋ ಕಾರ್ಯವನ್ನು ಮಾಡಲಿದ್ದೇವೆ ಎಂದರು.

ಇದೇ ವೇಳೆ ಬೀಚ್ ವಾಲಿಬಾಲ್ ನಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಲಾಯಿತು.