ಇತ್ತೀಚಿನ ಸುದ್ದಿ
ಕೇರಳ ಸಚಿವಾಲಯದಲ್ಲಿ ಬೆಂಕಿ ಆಕಸ್ಮಿಕ: ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆ, ಕಡತ ನಾಶಕ್ಕೆ ಯತ್ನ ಆರೋಪ
August 26, 2020, 2:05 AM

ತಿರುವನಂತಪುರಂ(reporterkarnataka news): ಕೇರಳ ಸಚಿವಾಲಯದ ಶಿಷ್ಟಾಚಾರ ಇಲಾಖೆಯ ಕಚೇರಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಕ಼಼ಡತಗಳು ಬೆಂಕಿಯಿಂದ ನಾಶವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇನ್ನೊಬ್ಬ ಸಚಿವ ಜಲೀಲ್ ಅವರನ್ನು ರಕ್ಷಿಸಲು ಮಾಡಿದ ನಾಟಕ ಎಂದು ಬಿಜೆಪಿ ಆರೋಪಿಸಿದೆ.
ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಜಲಫಿರಂಗಿ ಕೂಡ ಬಳಸಲಾಗಿದೆ. ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ಘಟನೆ ಪ್ರತಿಭಟಿಸಿ ಕಪ್ಪು ದಿನವನ್ನಾಗಿ ಆಚರಿಸಲು ಬಿಜೆಪಿ ಕರೆ ನೀಡಿದೆ.
ಕಾಂಗ್ರೆಸ್ ನಾಯಕರು ಕೂಡ ಬೆಂಕಿ ಆಕಸ್ಮಿಕ ಷಡ್ಯಂತ್ರ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ.