5:15 PM Thursday22 - October 2020
ಬ್ರೇಕಿಂಗ್ ನ್ಯೂಸ್
ನಳಿನ್ ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಪೋಕರಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಮಂಗಳೂರು ವೆಂಕಟರಮಣ ದೇಗುಲದ ಶಾರದೆಗೆ ಮಹಾಲಕ್ಷ್ಮಿ ಅಲಂಕಾರ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ ಹುಲಿಯ ಹಲ್ಲು ವಶ: ನಾಲ್ವರು ಆರೋಪಿಗಳ ಬಂಧನ ಆಕ್ಸ್ ಫರ್ಡ್ ಲಸಿಕೆ  ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೋತ್ಸವ ಇಂದು ಶಿರಾದಲ್ಲಿ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಟಿಆರ್ ಪಿ ಹಗರಣ: ಇಂದು ರಿಪಬ್ಲಿಕನ್ ಪ್ರಿಯಾ ಮುಖರ್ಜಿ ವಿಚಾರಣೆ ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ  ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ…

ಇತ್ತೀಚಿನ ಸುದ್ದಿ

ಕೇರಳದಲ್ಲಿ ಮತ್ತೆ ಶಂಕಿತ ಉಗ್ರರ ಬಂಧನ: ದೆಹಲಿ ಸ್ಫೋಟ ಸಂಚು ವಿಫಲ

September 19, 2020, 10:15 AM

ನವದೆಹಲಿ(reporterkarnataka news): ಕೇರಳದಲ್ಲಿ ಮತ್ತೆ ಮೂವರು  ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಎಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಇಂದು ಮುಂಜಾನೆ ರಾಷ್ಟ್ರೀಯ ತನಿಖಾದಳ ಬಂಧಿಸಿರುವ ಒಂಬತ್ತು ಶಂಕಿತ ಉಗ್ರರು ದೆಹಲಿಯಲ್ಲಿ ಭಾರೀ ಸ್ಫೋಟಕ್ಕೆ ಸಂಚು ಹೂಡಿದ್ದರು ಎಂಬ ಮಾಹಿತಿ  ಪ್ರಾಥಮಿಕ ವಿಚಾರಣೆಯಿಂದ  ಬೆಳಕಿಗೆ ಬಂದಿದೆ.

ಕೇರಳದಲ್ಲಿ ಬಂಧಿಸಲಾದ ಮೂವರು ಮೂಲತ: ಪಶ್ಚಿಮ ಬಂಗಾಳದವರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆರು ಮತ್ತು ಕೇರಳದಲ್ಲಿ ಮೂರು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಕೇರಳದ ಕೊಚ್ಚಿಯಲ್ಲಿ ಆರೋಪಿಗಳು ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ವರದಿಯಾಗಿದೆ. ಬಂಧಿತರಾದ ಎಲ್ಲರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯವರಾಗಿದ್ದಾರೆ.

ಅಲ್ ಖೈದಾ ಉಗ್ರ ಸಂಘಟನೆಯ ಜತೆ ಬಂಧಿತರೆಲ್ಲರೂ  ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಕೂಡ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು