ಇತ್ತೀಚಿನ ಸುದ್ದಿ
ಸ್ವಾತಂತ್ರ್ಯ ದಿನಾಚರಣೆ ಮುನ್ನ ದಿನ ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿ: ಇಬ್ಬರು ಪೊಲೀಸರು ಬಲಿ
August 14, 2020, 5:41 AM

ಶ್ರೀನಗರ(reporterkarnataka news): ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದತೆ ನಡೆಸಿರುವಾಗಲೇ ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ. ಶ್ರೀನಗರ ಸಮೀಪದ ನೌಗಾಂ ಬೈಪಾಸ್ ಬಳಿ ಈ ಘಟನೆ ಸಂಭವಿಸಿದೆ. ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ವೀರ ಮರಣ ಅಪ್ಪಿದ್ದಾರೆ.
ದಾಳಿಯಲ್ಲಿ ಒಬ್ಬರಿಗೆ ತೀವ್ರವಾದ ಗಾಯಗಳಾಗಿದೆ.
ಇಡೀ ಪ್ರದೇಶವನ್ನು ಭದ್ರತಾಪಡೆ ಸುತ್ತುವರಿದಿದೆ. ಕಳೆದ ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿ ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.