ಇತ್ತೀಚಿನ ಸುದ್ದಿ
ಅಮೆರಿಕ ಅಧ್ಯಕ್ಷರು ತೆರಿಗೆ ವಂಚಿಸಿದ್ದಾರೆಯೇ? ನ್ಯೂಯಾರ್ಕ್ ಟೈಮ್ಸ್ ಏನು ಹೇಳುತ್ತದೆ?
September 29, 2020, 8:24 AM

ವಾಷಿಂಗ್ಟ್ ನ್(reporterkarnataka news): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ತೆರಿಗೆ ವಂಚನೆ ಆರೋಪಕ್ಕೆ ಗುರಿಯಾಗಿದ್ದಾರೆ.. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಈ ಗಂಭೀರ ಆರೋಪ ಮಾಡಿದೆ.
ಈ ಕುರಿತ ಸುದೀರ್ಘ ವರದಿಯನ್ನು ಪತ್ರಿಕೆ ಪ್ರಕಟಿಸಿದೆ. ಟ್ರಂಪ್ ಕೇವಲ 750 ಡಾಲರ್ ತೆರಿಗೆಯಾಗಿ ಪಾವತಿಸಿದ್ದಾರೆ . 2016ರಲ್ಲಿ ಟ್ರಂಪ್ ತೆರಿಗೆ ಪಾವತಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ತೆರಿಗೆ ಪಾವತಿಸಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಮಾಡಿದೆ.
ಈ ಎಲ್ಲ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಇದು ಸುಳ್ಳು ವರದಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಕಾನೂನು ಅಡಿಯಲ್ಲಿ ಅಧ್ಯಕ್ಷರು ತಮ್ಮ ತೆರಿಗೆ ಪಾವತಿ ವಿಷಯ ಸಾರ್ವಜನಿಕಗೊಳಿಸಬೇಕಾದ ಅಗತ್ಯ ಇಲ್ಲ.