ಇತ್ತೀಚಿನ ಸುದ್ದಿ
ಟೆನ್ ಪಿನ್ ಬೌಲಿಂಗ್ ಚಾಂಪಿಯನ್ಶಿಪ್ ಟ್ರೋಫಿಗೆ ಪಿನ್ ಹಾಕಿದ ಕುಡ್ಲದ ಪೊಣ್ಣು ಪ್ರೀಮಲ್ ಜೋವಾನ್ ಹಾಗೂ ಅಶೋಕ್ ಕುಮಾರ್
December 26, 2020, 2:13 PM

ಮಂಗಳೂರು (Reporter Karnataka News)
ಅದ್ಭುತ ಆಟವಾಡಿದ ಆಕಾಶ್ ಅಶೋಕ್ ಕುಮಾರ್ ಹಾಗೂ ಪ್ರೀಮಲ್ ಜೊವಾನ್ ಅವರು ರಾಜ್ಯದ ಆರನೇ ಟೆನ್ಪಿನ್ ಬೌಲಿಂಗ್ ಚಾಂಪಿಯನ್ಷಿಪ್ನ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಬೆಂಗಳೂರಿನ ಚರ್ಚ್ಸ್ಟ್ರೀಟ್ ಅಮೀಬಾದಲ್ಲಿ ಶುಕ್ರವಾರ ಕೊನೆಗೊಂಡ ಚಾಂಪಿಯನ್ಷಿಪ್ನ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಕಾಶ್ 29 ಪಿನ್ಗಳಿಂದ (435–406) ಹಾಲಿ ಚಾಂಪಿಯನ್ ಕಿಶನ್ ಆರ್. ಅವರನ್ನು ಸೋಲಿಸಿದರು. ಆಕಾಶ್ ಅವರಿಗೆ ಇದು ನಾಲ್ಕನೇ ಪ್ರಶಸ್ತಿ.
ಮಂಗಳೂರಿನ ಹುಡುಗಿ ಪ್ರೀಮಲ್ :
ಮಹಿಳೆಯರ ವಿಭಾಗದ ಫೈನಲ್ ಹಣಾಹಣಿಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತು. ಪ್ರೀಮಲ್ ಅವರು ಗೀತಾ ಪೂಜಾರಿ ಅವರನ್ನು ಕೇವಲ 1 ಪಿನ್ ಅಂತರದಿಂದ ಮಣಿಸಿದರು. ಪ್ರೀಮಲ್ ಒಟ್ಟು 324 ಪಿನ್ ಗಳಿಸಿದರೆ, ಗೀತಾ 323 ಪಿನ್ ಕಲೆಹಾಕಿದರು. ಪ್ರೀಮಲ್ ಅವರು ಗೆದ್ದ ಮೊದಲ ಟ್ರೋಫಿ ಇದಾಗಿದೆ.