1:00 PM Friday4 - December 2020
ಬ್ರೇಕಿಂಗ್ ನ್ಯೂಸ್
ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ…

ಇತ್ತೀಚಿನ ಸುದ್ದಿ

ಧರ್ಮಗಳಾಚೆಗಿನ‌ ಸಾಮರಸ್ಯದ ಹೊಣೆ ಹೊತ್ತು ಕುಡ್ಲಕ್ಕೆಲ್ಲ ತೆನೆ ಹಂಚುವ ಹರ್ಬರ್ಟ್ ಡಿಸೋಜಾ

August 21, 2020, 6:23 PM

ಅನುಷ್ ಪಂಡಿತ್

ಜಿ.ಎನ್.ಎ.


Info.reporterkarnataka.com

ತುಳುನಾಡು ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಚೌತಿಯನ್ನು ತೆನೆ ಕಟ್ಟುವುದು ಹಾಗೂ ಹೊಸ ಅಕ್ಕಿ ಊಟ ಮಾಡುವ ಮೂಲಕವೂ ಆಚರಿಸಲಾಗುತ್ತದೆ.

ಹರ್ಬರ್ಟ್ ಡಿಸೋಜಾ

ಗಣೇಶ ಚತುರ್ಥಿಯ ದಿನದಂದು ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ತೆನೆಯನ್ನು ಸಂಗ್ರಹಿಸಿ, ಪೂಜೆ ಮಾಡಿ ಬಳಿಕ ಅದನ್ನು ಮನೆಗೆ ತಂದು ಅಥವಾ ದೇವಸ್ಥಾನದಲ್ಲಿಯೆ ಅದನ್ನು ಮಾವಿನ ಎಲೆಯಲ್ಲಿ ಕಟ್ಟಿಕೊಂಡು ಬಳಿಕ ಮನೆಯ ವಿವಿಧ ಮೂಲೆಗಳಿಗೆ ವಸ್ತುಗಳಿಗೆ ದೇವರ ಮಂಟಪಕ್ಕೆ ಕಟ್ಟುವ ರೂಢಿ ಇದೆ.


ಅದೇ ರೀತಿ ಕ್ರೈಸ್ತರಲ್ಲೂ ಕುರಲ್ ಹಬ್ಬದಂದು ಹೀಗೆ ತೆನೆ ಕಟ್ಟುವ ಪದ್ಧತಿ ತುಳುನಾಡಿನಲ್ಲಿದೆ.ಅದು ಈ ಬಾರಿ ಸೆಪ್ಟೆಂಬರ್ ತಿಂಗಳ 8ರಂದು ನಡೆಯಲಿದೆ.
ನಗರ ಪ್ರದೇಶದಲ್ಲಿ ಕೃಷಿ ಕಾರ್ಯ ಇಲ್ಲದೇ ಇರುವುದರಿಂದ ತೆನೆ ಸಂಗ್ರಹಿಸುವುದೆ ಇಲ್ಲಿ ಒಂದು ರೀತಿ ಸಾಹಸ. ಮಂಗಳೂರಿನ ಜಪ್ಪಿನಮೊಗರು ಕಡೆಕಾರು ನಿವಾಸಿ ಹರ್ಬರ್ಟ್ ಡಿ ಸೋಜಾ ಹಲವಾರು ವರ್ಷಗಳಿಂದ ತಮ್ಮ ಹೊಲದಲ್ಲಿ ತೆನೆ ಹಬ್ಬಕ್ಕೆಂದೆ ವಿಶೇಷ ಪೈರುಗಳನ್ನು ಬೆಳೆಸುತ್ತಾ ಬಂದಿದ್ದಾರೆ ಹಾಗೂ ಈ ಹೊಲಕ್ಕೆ ಯಾವುದೆ ಪ್ರಾಣಿ ಅಥವಾ ಮನುಷ್ಯರು ಒಳಬಾರದಂತೆ ಬೇಲಿ ಹಾಕಿಕೊಂಡು ಪಾವಿತ್ರ್ಯತೆ ಕಾಪಾಡಿಕೊಂಡು ತೆನೆಯನ್ನುಮನೆಗಳಿಗೆ, ನಗರ ಪ್ರದೇಶದ ದೇವಸ್ಥಾನಕ್ಕೆ ಅದೇ ರೀತಿ ಚರ್ಚುಗಳಿಗೂ ಪೂರೈಕೆ ಮಾಡುತ್ತಿರುವುದು ವಿಶೇಷವಾಗಿದೆ.

ಕಾಂಗ್ರೆಸ್ ಕಾರ್ಯಕರ್ತರೂ ಆಗಿರುವ ಹರ್ಬರ್ಟ್ ಡಿ ಸೋಜಾರಂತವರು ಜಾತ್ಯಾತೀತ ಮನೋಭಾವನೆಯಿಂದ ತೆನೆಹಬ್ಬಕ್ಕಾಗಿ ಪೈರನ್ನು ಬೆಳೆಸಿ ಎಲ್ಲಾ ಧರ್ಮದವರಿಗೂ ತೆನೆ ಪೈರನ್ನು ಉಚಿತವಾಗಿ ಪೂರೈಸುವ ಮುಖಾಂತರ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ.

ನಾವು ಬದುಕಿರುವಷ್ಟು ದಿನ ಇತರರಿಗೆ ನಮ್ಮ ಕೈಲಾದ ಮಟ್ಟಿನ ನಲ್ಲಿ ಸಹಾಯ ಮಾಡಬೇಕು. ಈ ಕಾರ್ಯದಲ್ಲಿ ನನಗೆ ನೆಮ್ಮದಿ ಇದೆ.. ದೇವರ ಅನುಗ್ರಹ ಇದ್ದರಷ್ಟೇ ಸಾಕು… ಕೊರೋನಾದಿಂದ ಎಲ್ಲರೂ ಭಯ ಬೀತಾ ರಾಗಿದ್ದಾರೆ.ದೇಶದ ಜನತೆ ಸಂಕಷ್ಟದಲ್ಲಿದ್ದಾರೆ. ಜಾಗರೂಕರಾಗಿ ಹಬ್ಬ ಆಚರಿಸಿ ಎಲ್ಲಾರಿಗೂ ಗಣೇಶ ಚತುರ್ಥಿಯ ಹಬ್ಬದ ಶುಭಾಶಯಗಳು.

ಹರ್ಬರ್ಟ್ ಡಿಸೋಜ ಕಡೇಕಾರು ಜಪ್ಪಿನ ಮೊಗರು, ಹಿರಿಯ ಕಾಂಗ್ರೆಸ್ ಕಾರ್ಯ ಕರ್ತ, ಸಮಾಜ ಸೇವಕ

ಇತ್ತೀಚಿನ ಸುದ್ದಿ

ಜಾಹೀರಾತು