ಇತ್ತೀಚಿನ ಸುದ್ದಿ
ತರುಣ್ ನನ್ನ ಕೊರಿಯೋಗ್ರಾಫರ್ ಅಷ್ಟೇ, ಪಾರ್ಟಿಗೆ ನಾನು ಹೋಗೊಲ್ಲ: ನಟಿ ಅನುಶ್ರೀ
September 26, 2020, 3:17 PM

ಮಂಗಳೂರು(reporterkarnataka news): ನಾನು ಯಾವುದೇ ಪಾರ್ಟಿಗೆ ಹೋಗುತ್ತಿರಲಿಲ್ಲ. ತರುಣ್ ನನ್ನ ಕೊರಿಯಾಗ್ರಾಫರ್ ಆಗಿದ್ದ. ಅದು ಬಿಟ್ಟರೆ ನನಗೆ ಆತನ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ ಎಂದು ನಟಿ, ನಿರೂಪಕಿ ಅನುಶ್ರೀ ಹೇಳಿದರು.
ಮಂಗಳೂರಿನ ಪಣಂಬೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ತರುಣ್ 12 ವರ್ಷಗಳ ಹಿಂದೆ ನನ್ನ ಕೊರಿಯಾಗ್ರಾಫರ್ ಆಗಿದ್ದ. ಕಿಶೋರ್ ಅಮನ್ ಕೂಡ 12 ವರ್ಷದ ಹಿಂದೆ ಪರಿಚಯ. ನಾನು ಪಾರ್ಟಿಗೆ ಹೋಗುವುದು ಕಡಿಮೆ. ಇವರ ಯಾರ ಜತೆಯೂ ನಾನು ಸಂಪರ್ಕ ಇಟ್ಟುಕೊಂಡಿಲ್ಲ ಎಂದು
ಅನುಶ್ರೀ ನುಡಿದರು.
ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದಾರೆ. ಇನ್ನೊಮ್ಮೆ ವಿಚಾರಣೆ ಕರೆದರೂ ತಾನು ಬರಲು ಸಿದ್ಧನಿದ್ದೇನೆ ಎಂದರು.