ಇತ್ತೀಚಿನ ಸುದ್ದಿ
ಸಿನಿ ಪ್ರಿಯರಿಗೆ ಸಿಹಿ ಸುದ್ದಿ: ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಶೀಘ್ರ ಓಪನ್ ಸಾಧ್ಯತೆ
August 19, 2020, 7:53 AM

ನವದೆಹಲಿ(reporterkarnataka news): ಕೊರನಾದ ಕಾರಣದಿಂದಾಗಿ ಮುಚ್ಚಲಾಗಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮತ್ತು ಕೇವಲ ಚಿತ್ರಮಂದಿರಗಳು ಮಾತ್ರ ಇರುವ ಕಟ್ಟಡಗಳನ್ನು ತೆರೆಯಲು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ. ಆದರೆ ಮಾಲ್ ಗಳಲ್ಲಿ ಇರುವ ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.
ಈ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳು ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳ ಪಾಲನೆಗೆ ಸಮಿತಿ ಸೂಚಿಸಿದೆ.