12:33 AM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ಮಂಗಳೂರು ಮಲ್ಟಿಪ್ಲೆಕ್ಸ್ ಗಳು ಖಾಲಿ ಖಾಲಿ: ಇರುವ 3ರಲ್ಲಿ 2 ಮಾತ್ರ ಓಪನ್ !!

October 16, 2020, 1:16 PM

ಮಂಗಳೂರು(reporterkarnataka news):

ಮಂಗಳೂರಿನಲ್ಲಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಯಾವುದೂ ತೆರೆದಿಲ್ಲ. ಇರುವ ಮೂರು ಮಲ್ಟಿಪ್ಲೆಕ್ಸ್‌ಗಳಲ್ಲಿ 2 ಮಾತ್ರ ಗುರುವಾರವೇ ತೆರೆದಿವೆ. 

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಆದರೆ ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ, ಹಿಂದಿ, ತುಳು ಭಾಷೆಯ ಹಳೆಯ ಸಿನೆಮಾಗಳನ್ನು ಪ್ರದರ್ಶಿಸುತ್ತಿದ್ದಾರೆ. ಗುರುವಾರ ಮಾತ್ರ ಜನರ ಪ್ರತಿಕ್ರಿಯೆ ನೀರಸವಾಗಿತ್ತು. ಮಲ್ಟಿಪ್ಲೆಕ್ಸ್‌ಗಳ ಶೇ.90 ಕುರ್ಚಿಗಳು ಖಾಲಿಯಾಗಿದ್ದುವು. ‘ಲಾಕ್‌ಡೌನ್‌ ಕಾರಣಕ್ಕೆ ಹೊಸ ಸಿನೆಮಾ ರಿಲೀಸ್‌ ಆಗಿಲ್ಲ. ಹಳೆ ಸಿನೆಮಾ ಹಾಕಿದರೆ ಜನ ಬಾರದಿದ್ದರೆ ನಷ್ಟವಾಗುತ್ತದೆ. ಹಾಗಾಗಿ ಇನ್ನೂ ಕೆಲವು ದಿನ ಕಾಯುತ್ತೇವೆ’ ಎಂದು ಚಿತ್ರಮಂದಿರ ಮಾಲೀಕರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು