4:34 AM Saturday23 - January 2021
ಬ್ರೇಕಿಂಗ್ ನ್ಯೂಸ್
ಶ್ರೀನಿವಾಸಪುರ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ವಿವರಕ್ಕೆ ನೀವೇ… ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ, ಸಿಸಿಬಿ ಪೊಲೀಸರಿಂದ 6 ಮಂದಿಯ ಬಂಧನ ಪ್ರತಿಭಟನೆ ನಿರತ ರೈತರಿಗೆ ಟ್ರ್ಯಾಕ್ಟರ್ Rally ನಡೆಸಲು ದಿಲ್ಲಿ ಪೊಲೀಸರು ಕೊನೆಗೂ ಅನುಮತಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು…

ಇತ್ತೀಚಿನ ಸುದ್ದಿ

ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ: ಎನ್ ಡಿಆರ್ ಎಫ್ ಕಾರ್ಯಾಚರಣೆಯಲ್ಲಿ ಒಂದು ಮೃತದೇಹ ಪತ್ತೆ,

August 8, 2020, 2:33 PM

ಮಡಿಕೇರಿ(reporterkarnataka news):

ಕೊಡಗಿನ ತಲಕಾವೇರಿ ಸಮೀಪ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ

ಸಂಬಂಧಿಸಿದಂತೆ ಎನ್ ಡಿ ಆರ್ ಎಫ್ ಕಾರ್ಯಾಚರಣೆ ಆರಂಭಗೊಂಡಿದ್ದು, ಭೂ ಸಮಾಧಿಯಾದ ಮನೆಯಿಂದ ಒಂದು ಮೃತದೇಹ ಪತ್ತೆಯಾಗಿದೆ.

ಬೆಟ್ಟ ಕುಸಿತದಿಂದ ಸಮಾಧಿಯಾದ ಮನೆಯೊಳಗೆ ಐವರು ಸಿಲುಕಿದ್ದರು. ಇದೀಗ ಒಂದು ಮೃತದೇಹವನ್ನು ಹೊರತೆಗೆಯಲಾಗಿದ್ದು, ಮಿಕ್ಕ ನಾಲ್ವರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ತಲಕಾವೇರಿ ದೇವಸ್ಥಾನದ ಅರ್ಚಕರಾದ ನಾರಾಯಣ ಆಚಾರ್, ಪತ್ನಿ ಶಾಂತ ಆಚಾರ್, ಅವರ ಸಹೋದರ ಆನಂದ ತೀರ್ಥ ಸ್ವಾಮಿ , ಸಹಾಯಕ ಅರ್ಚಕರಾದ ಪವನ್ ಮತ್ತು ರವಿ ಕಿರಣ್ ಅವರು ಮನೆಯೊಳಗೆ ಸಿಲುಕಿದ್ದಾರೆ ಎನ್ನಲಾಗಿದೆ. ಸಹಾಯಕ ಅರ್ಚಕರಲ್ಲೊಬ್ಬರು ಕಾಸರಗೋಡು ನಿವಾಸಿಯಾಗಿದ್ದಾರೆ. ಅರ್ಚಕ ನಾರಾಯಣಾಚಾರ್ ಅವರ ಸಹೋದರಿಯೊಬ್ಬರು ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಗುಡ್ಡದ ಮೇಲಿನಿಂದ ಮಣ್ಣು ಬಿದ್ದು ಸುಮಾರು ಐದು ಎಕರೆ ಭೂಮಿ ಪೂರ್ತಿ ಹಾನಿಯಾಗಿದೆ. ಗುರುವಾರ ದುರಂತ ನಡೆದಿತ್ತು.

ಶುಕ್ರವಾರ ಮುಂಜಾನೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾಪಡೆಯ ಯೋಧರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದರು. ಜಿಲ್ಲಾಧಿಕಾರಿ ರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು