ಇತ್ತೀಚಿನ ಸುದ್ದಿ
ಕ್ರಿಕೆಟಿಗ ಸುರೇಶ್ ರೈನಾ ಸಹಿತ 24 ಮಂದಿ ಬಂಧನ : ಕಾರಣವೇನು ಗೊತ್ತಾ ?
December 22, 2020, 1:46 PM

ಮುಂಬೈ(reporterkarnataka news): ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಬಂಧಿಸಲಾಗಿದೆ. ಇತರ 24 ಮಂದಿಯನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುಂಬೈ ವಿಮಾನ ನಿಲ್ದಾಣದ ಬಳಿ ಇರುವ ಕ್ಲಬ್ ನ ಮೇಲೆ ದಾಳಿ ನಡೆಸಿದ ಬಳಿಕ ಎಲ್ಲರನ್ನು ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ.
ಸಂಗೀತ ನಿರ್ದೇಶಕ ಗುರು ರಾಂಧವ ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಕ್ಲಬ್ ಮುಚ್ಚದಿರುವುದು ಮತ್ತು ಕೊರೋನಾ ಮಾರ್ಗ ಸೂಚಿ ಪಾಲಿಸದ್ದಕ್ಕೆ ಎಲ್ಲರನ್ನು ಬಂಧಿಸಲಾಗಿದೆ.