ಇತ್ತೀಚಿನ ಸುದ್ದಿ
ಸುರೇಶ್ ಅಂಗಡಿ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಾಂತ್ವನ
October 7, 2020, 12:44 PM

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಸುರೇಶ್ ಅಂಗಡಿ ಕುಟುಂಬ ಸದಸ್ಯರ ಜತೆ ಅವರು ಕೆಲವು ಹೊತ್ತು ಕಳೆದರು. ಸುರೇಶ್ ಅಂಗಡಿ ಕುಟುಂಬ ಸದಸ್ಯರಿಗೆ ಯಡಿಯೂರಪ್ಪ ಸಾಂತ್ವನದ ಮಾತನ್ನಾಡಿದರು.
ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ, ಪತ್ನಿ ಮಂಗಳಾ, ಮತ್ತು ಪುತ್ರಿಯರಾದ ಶ್ರದ್ಧಾ ಮತ್ತು ಸ್ಫೂರ್ತಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಧೈರ್ಯ ತುಂಬಿದರು