8:32 AM Wednesday25 - November 2020
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ 

ಇತ್ತೀಚಿನ ಸುದ್ದಿ

ಅಗಲಿದ ಪತ್ರಕರ್ತ ಸುರೇಶ್ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರ ಮಂಜೂರು

November 12, 2020, 9:33 PM

ಕೋಲಾರ(reporterkarnataka news):

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಮನವಿ ಮೇರೆಗೆ, ಕೋವಿಡ್ ಗೆ ಬಲಿಯಾದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕನ್ನಡ ಪ್ರಭ ವರದಿಗಾರ ಸಿಂ.ಕ.ಸುರೇಶ್  ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ. 

ಕೆಯುಡಬ್ಲ್ಯೂಜೆ ನೆರವು: ಪತ್ರಕರ್ತ ಸುರೇಶ್ ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದರೂ ಬದುಕುಳಿದಿರಲಿಲ್ಲ. 

13.5 ಲಕ್ಷ ಬಿಲ್ ಮಾಡಿದ ಆ ಖಾಸಗಿ ಆಸ್ಪತ್ರೆಗೆ ಅವರ ಪತ್ನಿ ಒಡವೆ ಮಾರಾಟ ಮಾಡಿ, 6.50 ಲಕ್ಷ ಬಿಲ್ ಹಣ ಕಟ್ಟಿ ಶವ ಪಡೆದಿದ್ದ ನೋವಿನ ಘಟನೆ ಕೆಯುಡಬ್ಲ್ಯೂಜೆ ಗಮನಕ್ಕೆ ಬಂದಿತ್ತು.

ಕೂಡಲೇ ಕಾರ್ಯೋನ್ಮುಖವಾದ ಕೆಯುಡಬ್ಲ್ಯೂಜೆ, ಆಸ್ಪತ್ರೆಗೆ ಕೊಡಬೇಕಾಗಿದ್ದ ಬಾಕಿ 7 ಲಕ್ಷ ಬಿಲ್ ಮನ್ನಾ ಮಾಡಿಸಿದ್ದಲ್ಲದೆ, ಹೆಚ್ಚುವರಿಯಾಗಿ ಪಡೆದಿದ್ದ 3.50 ಲಕ್ಷ ಹಣವನ್ನು ಸುರೇಶ್ ಕುಟುಂಬಕ್ಕೆ ವಾಪಸ್ ಕೊಡಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು