4:09 AM Monday25 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ಸುರತ್ಕಲ್ ಟೋಲ್ ಗೇಟ್ ನಲ್ಲಿ ಬಸ್ ಗಳಿಗೆ ಫಾಸ್ಟ್ ಟಾಗ್ : ಹೋರಾಟ ಸಮಿತಿ ತೀವ್ರ ವಿರೋಧ

November 30, 2020, 8:31 PM

ಮಂಗಳೂರು(reporterkarnataka news):

ಸುರತ್ಕಲ್ ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ತಾತ್ಕಾಲಿಕ ಟೋಲ್ ಗೇಟ್ ನಲ್ಲಿ ಇದುವರೆಗಿನ ವಿನಾಯತಿಗಳನ್ನು ರದ್ದುಗೊಳಿಸಿ ಖಾಸಗಿ ಬಸ್ ಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಟೋಲ್ ಗುತ್ತಿಗೆದಾರರರು ಮುಂದಾಗಿರುವುದನ್ನು  ಸುರತ್ಕಲ್ ನ

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ  ಬಲವಾಗಿ ವಿರೋಧಿಸಿದೆ.

 ಹಂತ ಹಂತವಾಗಿ ಹೇರಿಕೆಯಾಗುತ್ತಿರುವ ಸುಲಿಗೆ ನೀತಿಯನ್ನು ಬಸ್ ಮಾಲಕರ ಸಂಘ ಯಾವ ಕಾರಣಕ್ಕೂ ಒಪ್ಪಬಾರದು ಎಂದು ಒತ್ತಾಯಿಸಿದೆ.

ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹವೇ ಅಕ್ರಮ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಜಮಾಡಿ ಟೋಲ್ ಕೇಂದ್ರದಲ್ಲಿ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ವಿಲೀನಗೊಳಿಸುವ ನಿರ್ಧಾರ ಕೈಗೊಂಡು ಮೂರು ವರ್ಷ ಸಂದಿದೆ. ಆದರೆ ಗುತ್ತಿಗೆದಾರರ ಹಿತಾಸಕ್ತಿ ರಕ್ಷಣೆ, ಜನಪ್ರತಿನಿಧಿಗಳ ವೈಫಲ್ಯದಿಂದಾಗಿ ಇನ್ನೂ ಅಕ್ರಮವಾಗಿ ಸುಂಕ ಸಂಗ್ರಹಿಸುತ್ತಿದೆ. ಈ ಕುರಿತು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಸತತ ಹೋರಾಟ ನಡೆಸಿದ ಪರಿಣಾಮ, ಪ್ರತಿಭಟನೆಯ ತೀವ್ರತೆ ತಗ್ಗಿಸಲು ಸ್ಥಳೀಯ ವಾಹನಗಳಿಗೆ ಹಲವು ರಿಯಾಯತಿಗಳನ್ನು ಕಲ್ಪಿಸಲಾಗಿದೆ. ಆದರೂ ಟೋಲ್ ಗುತ್ತಿಗೆದಾರರು ಪದೇ ಪದೆ ರಿಯಾಯತಿಗಳನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಅದರ ಭಾಗವಾಗಿ ಸ್ಥಳೀಯ ಗೂಡ್ಸ್ ವಾಹನಗಳಿಗೆ, ಖಾಸಗಿ ಸಾರಿಗೆ ಬಸ್ ಗಳ ರಿಯಾಯತಿಗಳನ್ನು ರದ್ದುಗೊಳಿಸಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ನಿರ್ಧರಿಸಿದ್ದಾರೆ. ಅಕ್ರಮ ಟೋಲ್ ಗೇಟ್ ನ ಈ ಅಕ್ರಮ ಟೋಲ್ ಸಂಗ್ರಹವನ್ನು ಬಸ್ ಮಾಲಕರ ಸಂಘ ಯಾವ ಕಾರಣಕ್ಕೂ ಒಪ್ಪಬಾರದು. ಫಾಸ್ಟ್ ಟ್ಯಾಗ್ ಕಡ್ಡಾಯವನ್ನು ಒಕ್ಕೊರಲಿನಿಂದ ತಿರಸ್ಕರಿಬೇಕು. ಅದರ ಬದಲಾಗಿ ಹೆಚ್ಚುವರಿ ಟೋಲ್ ಸುಂಕವನ್ನು ಪ್ರಯಾಣಿಕರ ಟಿಕೇಟ್ ಮೇಲೆ ಹಾಕುವ ಯತ್ನವನ್ನು ನಡೆಸಬಾರದು, ಇದಕ್ಕೆ  ಸಾರ್ವಜನಿಕರ ಪ್ರಬಲ ವಿರೋಧ ಇದೆ. ತಾತ್ಕಾಲಿಕ ಟೋಲ್ ಗೇಟನ್ನು ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ನಿರ್ಣಯ ಜಾರಿಗೊಳ್ಳುವವರಗೆ ಜಿಲ್ಲಾಡಳಿತ ಯಥಾಸ್ಥಿತಿ ಮುಂದುವರಿಸಬೇಕು, ಇಲ್ಲದಿದ್ದಲ್ಲಿ ಮತ್ತೊಮ್ಮೆ ಪ್ರಬಲ ಹೋರಾಟ ಸಂಘಟಿಸಲಾಗುವುದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು