ಇತ್ತೀಚಿನ ಸುದ್ದಿ
ಸುರತ್ಕಲ್ ಮಾರ್ಕೆಟ್ ಕಾಮಗಾರಿ ವಿಳಂಬ, ಆಸ್ತಿ ತೆರಿಗೆ, ಕುಡಿಯುವ ನೀರು ಬಿಲ್ ಹೆಚ್ಚಳ ವಿರುದ್ಧ ಪ್ರತಿಭಟನೆ
January 27, 2021, 8:17 AM

ಸುರತ್ಕಲ್ (reporterkarnataka news)
ಸುರತ್ಕಲ್ ಮಾರ್ಕೆಟ್ ಕಾಮಗಾರಿ ವಿಳಂಬ,
ಈ ಖಾತಾ ಸಮಸ್ಯೆ, ಪ್ರಾಪರ್ಟಿ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್ ಆನ್ಲೈನ್ ಸಿಸ್ಟಮ್, ಘನತ್ಯಾಜ ಸೆಸ್
ಹಾಗೂ ಕುಡಿಯುವ ನೀರಿನ ಬಿಲ್ಲುಗಳನ್ನು ಹೆಚ್ಚಳ ಗೊಳಿಸಿದ್ದು ಜನರ ಜೀವನ ದುಸ್ತರವಾಗಿದ್ದು, ಈ ಪ್ರಯುಕ್ತ ಬುಧವಾರ ಸುರತ್ಕಲ್ ಪಾಲಿಕೆ ಮುಂಭಾಗ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುರತ್ಕಲ್ ಪಾಲಿಕೆ ವಲಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ ಕುಳಾಯಿ ಹೇಳಿದ್ದಾರೆ.
ಮೊಯಿದೀನ್ ಬಾವಾ ಅವರು ಅಧಿಕಾರದಲ್ಲಿದ್ದಾಗ ಉತ್ತಮ ಅಬಿವೃದ್ಧಿ ಕಾರ್ಯಗಳಾಗಿತ್ತು. ಇದೀಗ ನಿಂತ ನೀರಾಗಿದೆ. ಮಂಗಳೂರು ಉತ್ತರದಲ್ಲಿ
ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಇದೀಗ ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಎಲ್ಲಾ ತೆರಿಗೆ ಜಾಸ್ತಿ ಮಾಡುವ ಮೂಲಕ ಬಡವರು ತಲೆ ಎತ್ತದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ವೈ.ರಾಘವೇಂದ್ರ ರಾವ್ ಅವರು ಪಾಲಿಕೆಯಿಂದ ತೆರಿಗಳನ್ನು ದ್ವಿಗುಣಗೊಳಿಸುವ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ಮುಖಂಡ ಆನಂದ ಅಮೀನ್ ಮಾತನಾಡಿ ಖಾತೆ ಸಮಸ್ಯೆ, ನಿರಂತರವಾಗಿದೆ. ಜನರು ದಾಖಲೆ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ನೀರಿನ ಬಿಲ್ ಹೆಚ್ಚಳದಿಂದ ಸಂದರ್ಭದಲ್ಲಿ ಹಣ ಪಾವತಿಸಲು ಪರದಾಡುವಂತಾಗಿದೆ. ಈ ಎಲ್ಲಾ ಜನರ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.