ಇತ್ತೀಚಿನ ಸುದ್ದಿ
ಸುಪಾರಿ ಮರ್ಡರ್: ಖ್ಯಾತ ಗಾಯಕಿಯ ತಂದೆ ಸಹಿತ 5 ಮಂದಿ ಅಂದರ್, ಕೊಲೆಗೆ ಕಾರಣ ಏನು ಗೊತ್ತೇ?
October 28, 2020, 9:25 PM

ಮೈಸೂರು(reporterkarnataka news): ನಿವೃತ್ತ ಪ್ರಿನ್ಸಿಪಾಲ್ ಪರಶಿವಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ ಭಟ್ ಸೇರಿದಂತೆ ಐವರನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಮೂವರು ಶಿಕ್ಷಕರು ಎನ್ನುವುದು ಗಮನಾರ್ಹ.
ಮೈಸೂರಿನ ಸಂಸ್ಕೃತ ಪಾಠ ಶಾಲೆಯ ನಿವೃತ್ತ ಪ್ರಿನ್ಸಿಪಾಲರಾದ ಪರಶಿವಮೂರ್ತಿ ಅವರ ಹತ್ಯೆ ನಡೆದಿತ್ತು. ಸಂಸ್ಕೃತ ಪಾಠ ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು, ಸಹ ಶಿಕ್ಷಕ ಪರಶಿವ, ವಿಶ್ವನಾಥ ಭಟ್, ಮಡಿವಾಳಸ್ವಾಮಿ, ಮೇಸ್ತ್ರಿ ನಿರಂಜನ್ ಹಾಗೂ ಖಾಸಗಿ ಬ್ಯಾಂಕ್ ವೊಂದರ ಸಿಬ್ಬಂದಿ ನಾಗೇಶ್ ಬಂಧಿತ ಆರೋಪಿಗಳು. ಸುಪಾರಿ ನೀಡಿ ಈ ಹತ್ಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಪರಶಿವಮೂರ್ತಿ ಸಂಬಳ ನೀಡಲು ಕಮಿಷನ್ ಪಡೆಯುತ್ತಿದ್ದರು. ಕಮಿಷನ್ ನೀಡದಿದ್ದರೆ ಸಂಬಳ ಕೊಡದೆ ಸತಾಯಿಸುತ್ತಿದ್ದರು. ಇದರಿಂದ ಹತಾಶಗೊಂಡ ಆರೋಪಿಗಳು ಸುಪಾರಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಬಂಧಿತರಿಂದ 55 ಸಾವಿರ ರೂ. ನಗದು, 8 ಮೊಬೈಲ್ ಹಾಗೂ 4 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.