ಇತ್ತೀಚಿನ ಸುದ್ದಿ
ದಕ್ಷಿಣ ಸುಮಾತ್ರದಲ್ಲಿ ಭೂಕಂಪ: ಭಾರತದ ಕರಾವಳಿಗೆ ಸುನಾಮಿ ಭೀತಿ ಇದೆಯೇ?
August 19, 2020, 11:54 AM

ಜಕಾರ್ತ(reporterkarnataka news): ಇಂಡೊನೇಷ್ಯಾದ ದಕ್ಷಿಣ ಸುಮಾತ್ರದಲ್ಲಿ ಬುಧವಾರ ಸಂಭವಿಸಿದ ಭೂಕಂಪದಿಂದ ಭಾರತಕ್ಕೆ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಇಂಡಿಯನ್ ಸುನಾಮಿ ಅರ್ಲಿ ವಾರ್ನಿಂಗ್ ಸೆಂಟರ್ (ಐಟಿಇಡಬ್ಲ್ಯುಸಿ) ತಿಳಿಸಿದೆ.
ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆ 3.15ಕ್ಕೆ ಭೂಕಂಪ ಸಂಭವಿಸಿತ್ತು. ಕಂಪನ ರಿಕ್ಟರ್ ಮಾಪಕದಲ್ಲಿ 6.5 ದಾಖಲಾಗಿದೆ. ದಕ್ಷಿಣ ಸುಮಾತ್ರಾ ಪ್ರದೇಶದಲ್ಲಿ ಭೂಕಂಪ ಕೇಂದ್ರೀಕೃತವಾಗಿದ್ದು, 4.41 ಅಕ್ಷಾಂಶ ಹಾಗೂ 101.6 ರೇಖಾಂಶದಲ್ಲಿ ಸಂಭವಿಸಿದೆ. ಭೂಕಂಪದಿಂದ ಭಾರತದ ಯಾವುದೇ ಕರಾವಳಿ ಪ್ರದೇಶಕ್ಕೆ ಸುನಾಮಿಯ ಭೀತಿ ಇಲ್ಲ ಎಂದು ವಾರ್ನಿಂಗ್ ಸೆಂಟರ್ ತಿಳಿಸಿದೆ.