ಇತ್ತೀಚಿನ ಸುದ್ದಿ
ಸುಬ್ರಹ್ಮಣ್ಯ : ಕ್ಷೇತ್ರದಲ್ಲಿ ಹೆಚ್ಚಾದ ಭಕ್ತರ ದಟ್ಟಣೆ, ಶನಿವಾರ ಮಧ್ಯರಾತ್ರಿಯಿಂದ ಸಾಲುಗಟ್ಟಿ ನಿಂತಿರುವ ಭಕ್ತರು
December 6, 2020, 2:23 PM

ಸುಬ್ರಹ್ಮಣ್ಯ (Reporter Karnataka News)
ದಕ್ಷಿಣ ಕನ್ನಡದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಹಾಗೂ ಆಶ್ಲೇಷ ನಕ್ಷತ್ರ ಪೂಜೆ ನೆರವೇರಿಸುವ ಸಲುವಾಗಿ ಭಕ್ತರ ದಟ್ಟಣೆ ಹೆಚ್ಚಾಗಿದೆ.
ಪೂಜೆ ನೆರವೇರಿಸಲು ಕ್ಷೇತ್ರದ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಶನಿವಾರ ರಾತ್ರಿ 12 ಗಂಟೆಯಿಂದ ಸಾಲಿನಲ್ಲಿ ನಿಂತಿರುವ ಭಕ್ತರು, ಸೇವಾ ರಶೀದಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಮಧ್ಯರಾತ್ರಿಯಿಂದ ಸರತಿ ಸಾಲಿನಲ್ಲಿ ನಿಂತರೂ ಆಶ್ಲೇಷ ಪೂಜೆಗೆ ಅವಕಾಶ ಸಿಗದೇ ಇರುವುದರಿಂದ ಭಕ್ತರು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.