ಇತ್ತೀಚಿನ ಸುದ್ದಿ
ಡ್ರಗ್ಸ್ ಸಾಗಾಟ : ಬಾಲಿವುಡ್ ನಟ, ಸ್ಟಾರ್ ಡ್ಯಾನ್ಸರ್ ಮಂಗಳೂರಿನಲ್ಲಿ ಬಂಧನ
September 19, 2020, 12:24 PM

ಮಂಗಳೂರು (Reporter Karnataka News)
ಮಂಗಳೂರಿನ ಯುವ ಡ್ಯಾನ್ಸರ್, ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಕಿಶೋರ್ ಅಮನ್ ಶೆಟ್ಟಿಯನ್ನು ಡ್ರಗ್ಸ್ ಸಾಗಾಟ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೃತ್ಯ ರಿಯಾಲಿಟಿ ಶೋ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ನಲ್ಲಿ ಪಾಲ್ಗೊಂಡು ಪ್ರತಿಭಾವಂತ ಯುವಕ ಎಂಬ ಜನಪ್ರಿಯತೆ ಪಡೆದಿದ್ದ. ಇದೇ ಕಾರಣದಿಂದಲೇ ಹಿಂದಿಯ ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ. ಈತನ ಚಲನಚಲನದ ಮೇಲೆ ಗಮನ ಇರಿಸಿದ್ದ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದರು ಹಾಗೂ ಬಂದರು ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.