ಇತ್ತೀಚಿನ ಸುದ್ದಿ
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಉತ್ತರ ಪತ್ರಿಕೆಗಳಮೌಲ್ಯಮಾಪನ ಅ.7 ರಿಂದ ಪ್ರಾರಂಭ
October 6, 2020, 9:27 PM

ಮಂಗಳೂರು (reporterkarnataka news): ಪ್ರಸಕ್ತ ಸಾಲಿನ ಸೆಪ್ಟೆಂಬರ್ ತಿಂಗಳಿನಲ್ಲಿ ಎಸ್.ಎಸ್ಎಲ್.ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ದ.ಕ. ಜಿಲ್ಲೆಯ 6 ಮೌಲ್ಯಮಾಪನ ಕೇಂದ್ರಗಳಲ್ಲಿ ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಪಡೆದಿರುವ ಜಿಲ್ಲೆಯ ಎಲ್ಲಾ ಮೌಲ್ಯಮಾಪಕರು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕು. ಮೌಲ್ಯಮಾಪಕರಿಗೆ ಮಂಡಳಿ ಯಾವುದೇ ವಿನಾಯತಿಯನ್ನು ನೀಡಿರುವುದಿಲ್ಲ, ಗೈರು ಹಾಜರಾದಲ್ಲಿ ನಿಯಮಾನುಸಾರ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.