ಇತ್ತೀಚಿನ ಸುದ್ದಿ
ನಟಿ ಸಂಜನಾ ತಂಗಿ ನಿಕ್ಕಿ ಅಭಿನಯಿಸಿದ ಸಿನಿಮಾವೊಂದರ ಹಾಡು ಇದೀಗ ವೈರಲ್!
September 14, 2020, 10:06 PM

ಬೆಂಗಳೂರು(reporterkarnataka news):
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ಚಿತ್ರನಟಿ ಸಂಜನಾ ಗಲ್ರಾನಿ ಅವರಿಗೆ ಒಬ್ಬಳು ತಂಗಿ ಇದ್ದಾಳೆ ಅನ್ನುವುದು ಎಷ್ಟು ಜನರಿಗೆ ಗೊತ್ತಿದೆ? ಆಕೆ ಕೂಡ ಚಿತ್ರನಟಿ ಎನ್ನುವುದು ಕೆಲವರಿಗಷ್ಟೇ ತಿಳಿದಿದೆ.

ಸಂಜನಾಗೆ ನಿಕ್ಕಿ ಗಲ್ರಾನಿ ಎಂಬ ತಂಗಿ ಇದ್ದಾಳೆ. ಹೆಚ್ಚು ಕಡಿಮೆ ನೋಡಲು ಈಗೆ ಸಂಜನಾ ತರವೇ ಇದ್ದಾಳೆ. ಈಕೆ ಕೂಡ ಚಿತ್ರನಟಿ. ನಿಕ್ಕಿ ಅವರು ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ಪ್ರಸಿದ್ಧ ಕ್ರಿಕೆಟಿಗ ಶ್ರೀಶಾಂತ್ ಜತೆ ನಿಕ್ಕಿ ಟೀಮ್ 5 ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದಾಳೆ. ಈ ಚಿತ್ರದ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.