11:12 AM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ಶ್ರೀನಿವಾಸಪುರದಲ್ಲಿ ಜೀವವಿಮಾ ನಿಗಮದ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರ

November 8, 2020, 1:34 PM

ಕೋಲಾರ(reporterkarnataka news):

ಶ್ರೀನಿವಾಸಪುರದ ಸ್ಥಳಿಯ ಜೀವ ವಿಮಾ ಪ್ರತಿನಿಧಿಗಳು ಕಳೆದ ವರ್ಷದಲ್ಲಿ ಉತ್ತಮವಾಗಿ ವಹಿವಾಟು ನಡೆಸಿ ಹೆಚ್ಚಿನ ಪಾಲಿಸಿ ಮಾಡಿದ್ದಾರೆ. ಈ ವರ್ಷ ಕೋವಿಡ್ ‌ನಿಂದ ವಹಿವಾಟ ಕಡಿಮೆ ಯಾಗಿದ್ದು ಇರುವ 5 ತಿಂಗಳಲ್ಲಿ ಹೆಚ್ಚಿನಪಾಲಿಸಿಗಳು ಮಾಡಿಸಿ ತಮ್ಮ ಕರ್ತವ್ಯಶಿಸ್ತುಬದ್ಧವಾಗಿ ನಿರ್ವಹಿಸಬೇಕೆಂದು ವ್ಯವಸ್ಥಾಪಕರು ಎಸ್. ಸತಿಶ್‌ ಹೇಳಿದರು. 

ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಎಲ್‌ಐಸಿ ತಾಲೂಕು ಆಭಿವೃದ್ಧಿ ಅಧಿಕಾರಿ ಆರ್‌. ವಿ. ಕುಲಕರ್ಣಿ ಏರ್ಪಡಿಸಿದ್ದ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು .

 ಯಾತ್ರಿಕ ಕೌಶಲ್ಯ ಮುಂದುವರೆದ  ಈ ಕಾಲದಲ್ಲಿ ಜನರ ಆರೋಗ್ಯ ಸುರಕ್ಷತೆಗೆ ಜೀವ ವಿಮಾ ಮತ್ತು ಕ್ಯಾನ್ಸರ್‌ ಪಾಲಿಸಿಗಳು ಮಾಡಿಸಿ ಜನರ ಆರ್ಥಿಕ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ಕೊಡ ಬೇಕು . ಶ್ರೀನಿವಾಸಪುರದಲ್ಲಿ ಎಲ್ ಐ ಸಿ ಕಚೇರಿ ಪ್ರಾರಂಭಿಸಿರುವುದೇ ಇಲ್ಲಿನ ಜೀವ ವಿಮಾ ಗ್ರಾಹಕರಿಗೆ ಸಕಾರಾತ್ಮಕವಾಗಿ ಸೇವೆ ನೀಡ ಬೇಕೆನ್ನುವ ಉದ್ದೇಶದಿಂದ . ಕೃಷಿ ಹೊಂದಿರುವ ರೈತರೆ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ತಾಲೂಕಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾವಾರ ಮಹಿವಾಟು ಬೆಳೆಸಬೇಕು. ಕಾಲಕಾಲಕ್ಕೆ ಪಾಲಿಸಿದಾರರಿಗೆ ಇರುವಲ್ಲಿಗೆ ಸೇವೆ ನೀಡುವುದೆ ನಮ್ಮ ಗುರಿಯಾಗಿಸಿಕೊಳ್ಳಬೇಕೆಂದು ತಿಳಿಸಿದರು . ತಾಲೂಕು ಅಭಿವೃದ್ಧಿ ಅಧಿಕಾರಿ ಆರ್‌. ವಿ. ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ ಐ ಸಿ ಪ್ರತಿನಿಧಿಗಳು ಪ್ರತಿ ದಿನ ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಅವರಿಗಾಗಿ ವರ್ಷಕ್ಕೆ ಕನಿಷ್ಟ 3 ಸಾವಿರ ರೂ. ಕ್ಯಾನ್ಸರ್‌ ಆರೋಗ್ಯ ವಿಮಾ ಪಾಲಿಸಿ

ಮಾಡಿಸಿದರೆ 10 ಲಕ್ಷ ರೂ.  ಭದ್ರತೆಯ ಪಾಲಿಸಿ ಕೊಡಬಹುದು . 

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಆರೋಗ್ಯ ಕ್ಷೀಣಿಸುತ್ತಿದೆ. ಕಾಯಿಲೆ ಬಂದಾಗ ಕಷ್ಟ ಪಡುವ ಬದಲು ಈಗಿಂದಲೆ ಎಚ್ಚರ ವಹಿಸಿ. ಸಮಯ ವ್ಯರ್ಥ ಮಾಡದೆ ಹಣದಂತೆ ಬಳಸಿಕೊಳ್ಳಿ ಹಣದಿಂದಲೆ ಎಲ್ಲವೂ ನಡೆಯುತ್ತದೆ ಎನ್ನಲಾಗದು. ಅಗತ್ಯಗಳಿಗೆ ಹಣ ಬೇಕೇಬೇಕು . 

ನಮ್ಮ ತಂಡದಲ್ಲಿ ಈಗಾಗಲೆ ಇಬ್ಬರು ಎಂ ಡಿ ಆರ್ ಟಿ ಮಾಡಿ ತಂಡದ ಗೌರವ ಹೆಚ್ಚಿಸಿದ್ದಾರೆ . ನಾವು ಯಾವುದೆ ಕೆಲಸವನ್ನು ಮಾಡುವಾಗ ದೃಡ ಸಂಕಲ್ಪ ಮತ್ತು ಗುರಿ ಇರಬೇಕು . ಸರಕಾರಿ ಸೌಕರರಿಗೆ ನಿರಂತರ ಕೆಲಸ ಮಾಡಿದರೆ ವೇತನ ಸಿಗುತ್ತದೆ . ಅದೇ ರೀತಿ ಪ್ರತಿನಿಧಿಗಳು ವೃತ್ತಿ ಧರ್ಮ ಜವಾಬ್ದಾರಿ ಅರಿತು ಪ್ರತಿ ದಿನ ನಿರ್ಧಿಷ್ಟ ವಧಿ ಜೀವ ವಿಮೆ ಪಾಲಿಸಿ ಮಾಡಿಸಲು ಕಾಲ ಮೀಸಲಿಟ್ಟು ಕೆಲಸ ಮಾಡಬೇಕೆಂದು ತಿಳಿಸಿದರು .

ಇತ್ತೀಚಿನ ಸುದ್ದಿ

ಜಾಹೀರಾತು