3:10 PM Friday26 - February 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲೆಬಸ್ ವಿದ್ಯಾರ್ಥಿಗಳಿಗೆ 3 ತಿಂಗಳ ಕ್ರ್ಯಾಶ್ ಕೋರ್ಸ್: ಶ್ಲಾಘ್ಯದಲ್ಲಿ ಅಡ್ಮಿಷನ್ ಆರಂಭ ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ…

ಇತ್ತೀಚಿನ ಸುದ್ದಿ

ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಎಂಜಿನಿಯರ್ಸ್ ಡೇ 

September 28, 2020, 4:15 PM

ಮಂಗಳೂರು(reporterkarnataka news): ಮುಕ್ಕದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಸಭಾಂಗಣದಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿ ಲಯನ್ ಡಿಸ್ಟ್ರಿಕ್ಟ್ ಗವರ್ನರ್ 317ಸಿ ನೀಲಕಂಠ ಎಂ. ಹಗಡೆ ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಹೆಗಡೆ

ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಸಮಾಜಕ್ಕೆ ಹಾಗೂ ದೇಶಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು.

ನೀಲಕಂಠ ಎಂ. ಹೆಗಡೆ ಮಾತನಾಡಿ, ಸಮಾಜ ಮತ್ತು ದೇಶವನ್ನು ಕಟ್ಟುವಲ್ಲಿ ಇಂಜಿನಿಯರ್ ವೃತ್ತಿಪರರ ಕೊಡುಗೆ ಅಪಾರ. ಸೃಜನಶೀಲತೆ, ಆವಿಷ್ಕಾರ ಹಾಗೂ ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಯಾವುದೇ ಸಮಸ್ಯೆಗಳಿಗೆ ತಾಂತ್ರಿಕ ವೃತ್ತಿಪರರು ಪರಿಹಾರವನ್ನು ಕೊಂಡುಕೊಳ್ಳಲು ಸಾಧ್ಯ ಎಂದು ಹೇಳಿದರು. 

ಸಾಮಾಜಿಕವಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಲಯನ್

ನೀಲಕಂಠ ಎಂ. ಹೆಗಡೆ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ, ಮೂಲತಃ ಇಂಜಿನಿಯರಿಂಗ್ ಪದವೀಧರರಾದ, ಪ್ರಖ್ಯಾತ ಹಿನ್ನಲೆ ಗಾಯಕರಾದ ಪದ್ಮಭೂಷಣ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ರವರಿಗೆ ಗೌರವಸೂಚಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ ಮಾತನಾಡಿ, ಸತ್ಕಾರ-ಸಂಸಾರ-ಸಂಸ್ಕಾರ, ಈ ಮೂರೂ ತತ್ವಗಳು ನಮ್ಮ ಜೀವನದಲ್ಲಿ ಅತೀ ಮುಖ್ಯ. ಸರ್ ಎಂ. ವಿಶ್ವೇಶ್ವರಯ್ಯ ರವರ ತತ್ವ-ಸಿದ್ಧಾಂತಗಳು ಎಂದೆಂದಿಗೂ ಇಂಜಿನಿಯರಿಂಗ್ ವೃತ್ತಿಪರರಿಗೆ ಆದರ್ಶಪ್ರಾಯವಾಗಿರುತ್ತದೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್ ಮಾತನಾಡಿ, ಮಾನವ ಕುಲ ಹಾಗೂ ದೇಶದ ಆರ್ಥಿಕ ಪ್ರಗತಿಯಲ್ಲಿ ಇಂಜಿನಿಯರಿಂಗ್ ವೃತ್ತಿಪರರ ಸೇವೆ ಮತ್ತು ಕೊಡುಗೆ ಮಹತ್ತರವಾದದ್ದು ಎಂದು ಹೇಳಿದರು. ಅಣೆಕಟ್ಟುಗಳು ಹಾಗೂ ಕೈಗಾರಿಕೆಗಳು ದೇಶದ ಆಧುನಿಕ ದೇವಾಲಯಗಳು ಎಂದು  ಸರ್ ಎಂ. ವಿಶ್ವೇಶ್ವರಯ್ಯ ರವರು ಭಾವಿಸಿದ್ದರು, ಹಾಗೆಯೇ, ಹಲವಾರು ಅಣೆಕಟ್ಟುಗಳನ್ನು ಹಾಗೂ ಕೈಗಾರಿಕಾ ಸಂಸ್ಥೆಗಳನ್ನು ಪ್ರಾರಂಭಿಸಿದರು. ಹೊಸ ವಿಧಾನಗಳನ್ನು ರಚಿಸುವುದು ಹಾಗೂ ತಂತ್ರಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದು ಇಂಜಿನಿಯರಿಂಗ್ ವೃತ್ತಿಪರರ ಮುಂದೆ ಇರುವ ಸವಾಲು. ಪರಿಸರ ಸ್ನೇಹಿ ಸುಸ್ಥಿರ ಅಭಿವೃದ್ಧಿ ಇಂದಿನ ಅವಶ್ಯಕತೆಯಾಗಿದೆ. ತಮ್ಮ ಜ್ಞಾನದ ಮೂಲಕ ಹೊಸ ತಂತ್ರಜ್ಞಾನವನ್ನು ಸಂಶೋಧಿಸುವ ಅವಕಾಶವನ್ನು ಸೃಷ್ಠಿಸಬೇಕಿದೆ. ಆ ಮೂಲಕ, ಕಡಿಮೆ ವೆಚ್ಚದಲ್ಲಿ ಸೇವೆ-ಸೌಲಭ್ಯಗಳು ಸಮಾಜದ ಎಲ್ಲರಿಗೂ ಸಿಗುವಂತಾಗಲು ವಿವಿಧ ಇಂಜಿನಿಯರಿಂಗ್ ಕ್ಷೇತ್ರಗಳ ವೃತ್ತಿಪರರು ಶ್ರಮಿಸಬೇಕು ಎಂದು ಹೇಳಿದರು.
ಪ್ರೊ. ರಾಜೇಶ್ವರಿ ಪ್ರಾರ್ಥನೆ ಮಾಡಿದರು. ಸೃಷ್ಠಿಕ ಸಂಯೋಜಕ ಪ್ರೊ. ಪ್ರಸನ್ನ ಪಿ. ರಾವ್  ಸ್ವಾಗತಿಸಿದರು. ಪ್ರೊ. ಕೆ. ಶ್ರೀನಾಥ್ ರಾವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಪ್ರೊ. ಭವಾನಿ ಶಂಕರ್ ವಂದಿಸಿದರು.ಪ್ರೊ. ಎಸ್. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಡಾ. (ಲೆಫ್ಟಿನೆಂಟ್ ಕಮಾಂಡರ್) ಪಿ. ಕೆ. ಸುರೇಶ್ ಕುಮಾರ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ.ಎಂ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪ್ರಕಾಶ್ ಬಿ., ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು