4:42 PM Saturday28 - November 2020
ಬ್ರೇಕಿಂಗ್ ನ್ಯೂಸ್
ಕಲ್ಲಿದ್ದಲು ಮಾಫಿಯಾ: ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಸಿಬಿಐ ದಾಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶ ಕಂದಾಯ ಸಚಿವ ಆರ್. ಅಶೋಕ್ ದೆಹಲಿಯಲ್ಲಿ ರೈಲ್ವೆ ಸಚಿವರ ಭೇಟಿ  ಕೊರೊನಾ ಲಸಿಕೆ ಅಭಿವೃದ್ಧಿ: ಇಂದು ಸಂಶೋಧನಾ ಸಂಸ್ಥೆಗಳಿಗೆ ಪ್ರಧಾನಿ ಮೋದಿ ಭೇಟಿ ಮೆಹಬೂಬ ಮುಫ್ತಿ ಗೃಹಬಂಧನದಲ್ಲಿ ಇಲ್ಲ:  ಜಮ್ಮು- ಕಾಶ್ಮೀರ ಸರಕಾರ ಸ್ಪಷ್ಟನೆ ಆತ್ಮಹತ್ಯೆಗೆ ಯತ್ನಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಮುಂದುವರಿದ ಚಿಕಿತ್ಸೆ ರಾಜಕೀಯ ಒತ್ತಡದಿಂದ ಸಂತೋಷ್ ಆತ್ಮಹತ್ಯೆಗೆ ಯತ್ನ: ಪತ್ನಿ ಜಾಹ್ನವಿ ಆರೋಪ ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ

ಇತ್ತೀಚಿನ ಸುದ್ದಿ

ಖಾತೆ ಬದಲಾವಣೆ ಅಸಮಾಧಾನ: ಸಂಪುಟಕ್ಕೆ ಸಚಿವ ಶ್ರೀರಾಮುಲು ರಾಜೀನಾಮೆ ?

October 13, 2020, 9:56 AM

ಬೆಂಗಳೂರು(reporterkarnataka news): ಖಾತೆ ಬದಲಾವಣೆಯಿಂದ ತೀವ್ರ ಅಸಮಾಧಾನಗೊಂಡಿರುವ ಸಚಿವ ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. 

ಸಮಾಜ ಕಲ್ಯಾಣ ಖಾತೆ, ಆರೋಗ್ಯ ಇಲಾಖೆಗಿಂತೆ ಹೆಚ್ಚು ಮಹತ್ವದ ಖಾತೆಯಾಗಿದೆ. ಆದರೆ ಆರೋಗ್ಯ ಇಲಾಖೆ ನಿಭಾಯಿಸಲು ವಿಫಲವಾದ ಕಾರಣ ಖಾತೆ ಬದಲಾವಣೆ ಮಾಡಲಾಗಿದೆ ಎಂಬ ಟೀಕೆಗಳಿಂದ ಶ್ರೀರಾಮುಲು ಮನ ನೊಂದಿದ್ದಾರೆ ಎಂದು ಹೇಳಲಾಗಿದೆ.

ಕೊರೋನಾ ರಾಜ್ಯದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಶ್ರೀರಾಮುಲು ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವೈದ್ಯ ಸಮುದಾಯಕ್ಕೆ ಧೈರ್ಯ ತುಂಬಿದ್ದರು. ಘಟಾನುಘಟಿ ಸಚಿವರು ಡಾಲರ್ಸ್ ಕಾಲನಿ ಮನೆಗಳಲ್ಲಿ ಬೆಚ್ಚಗೆ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಶ್ರೀರಾಮುಲು ಆಸ್ಪತ್ರೆಗಳಲ್ಲಿ  ವಾಸ್ತವ್ಯ ಹೂಡಿದ್ದರು.

 ಕೊರೋನಾ ಸೋಂಕಿತರಾಗಿದ್ದ ಅತ್ಯಾಧುನಿಕ ಖಾಸಗಿ ಆಸ್ಪತ್ರೆ ಆಶ್ರಯಿಸದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಷ್ಟು ಮಾದರಿ ಕೆಲಸ ಮಾಡಿರುವ ಶ್ರೀರಾಮುಲು ಅವರ ಖಾತೆ ಬದಲಾವಣೆ ಎಷ್ಟು ಸರಿ ಎಂಬುದು ಅವರ ಬೆಂಬಲಿಗರ ಪ್ರಶ್ನೆ

ಶ್ರೀರಾಮುಲು ಅವರಿಗೆ  ಸಂವಹನದ ಕೊರತೆ ಎಂಬ ಮಾತು ಕೇಳಿ ಬಂದಿದೆ. ಆದರೆ ಶ್ರೀರಾಮುಲು ಬೆಳೆದು ಬಂದ ಪರಿಸರ ಅವರ ಭಾಷೆಯ ಮೇಲೆ ಪ್ರಭಾವ ಬೀರಿದೆ. ಬಳ್ಳಾರಿ ಶೈಲ್ಲಿಯ ಕನ್ನಡ ಮಾತನಾಡುವ ಶ್ರೀರಾಮುಲು ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಇದು ಎಲ್ಲರೂ ಮೆಚ್ಚಬೇಕೇ ಹೊರತು ಅದು ಟೀಕೆಗೆ ಆಹಾರವಾಗಬಾರದು ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

ಇಂದು ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ ಬಳಿಕ ಶ್ರೀರಾಮುಲು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು