4:02 AM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಸೈಕಲೇರಿ ನಾಪತ್ತೆಯಾದ ಬಾಲಕ ಪತ್ತೆ ಹಚ್ಚಿ ಅಮ್ಮನ ಮಡಿಲಿಗೊಪ್ಪಿಸಿದ ಸೋಶಿಯಲ್ ಮೀಡಿಯಾ!

October 29, 2020, 11:57 PM

ಮಂಗಳೂರು(reporterkarnataka news)

ಸಾಮಾಜಿಕ ಜಾಲತಾಣಗಳು ಎಷ್ಟು ಪ್ರಭಾವಶಾಲಿಯಾಗಿದೆ ಎನ್ನುವುದು ಮತ್ತೆ ಸಾಬೀತಾಗಿದೆ. ಅಮ್ಮನ ಜತೆ ಮುನಿಸಿಕೊಂಡು ಸೈಕಲ್ ಏರಿ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದ ಪುಟ್ಟ ಬಾಲಕನೊಬ್ಬನನ್ನು ಇದೇ ಸೋಶಿಯಲ್ ಮೀಡಿಯಾ ಪತ್ತೆ ಹಚ್ಚಿ ಮತ್ತೆ ಅಮ್ಮನ ಮಡಿಲಿಗೊಪ್ಪಿಸಿದೆ.

ಇದೆಲ್ಲ ನಡೆದದ್ದು ಮಂಗಳೂರಿನ ದೇರೆಬೈಲ್ ಕೊಂಚಾಡಿ ಸಮೀಪದ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನಲ್ಲಿ. 12ರ ಹರೆಯದ ತುಂಟ ಹುಡ್ಗ ಸೂರಜ್

ಮೊಬೈಲ್ ವಿಚಾರದಲ್ಲಿ ಅಮ್ಮನ ಜತೆ ಮುನಿಸಿಕೊಂಡು ಗುರುವಾರ ದಿನ ಮನೆ ಬಿಟ್ಟು ಹೋಗಿದ್ದ.

ಕಾವೂರಿನ ಖಾಸಗಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಈ ಪೋರ ನಾಪತ್ತೆಯಾಗಿರುವುದನ್ನು ಕಂಡು ಮನೆ ಮಂದಿ ಕಂಗಾಲಾಗಿದ್ದರು. ಬಾಲಕ ಕಾಣೆಯಾದ ಬಗ್ಗೆ ಮನೆಯವರು ಸಾಮಾಜಿಕ ಜಾಲತಾಣದಲ್ಲಿ ಆತನ ಫೋಟೋ ಹಾಕಿ ಪತ್ತೆಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಕ್ಷಣಾರ್ಧದಲ್ಲಿ ಇದು ವೈರಲ್ ಆಗಿತ್ತು. ದೇಶ- ವಿದೇಶಗಳಲ್ಲಿ ಸುತ್ತಾಡಿತ್ತು. ಇದರಿಂದ ಜಿಲ್ಲೆಯಾದ್ಯಂತ ಜನರು ಕಾರ್ಯಪ್ರವೃತರಾದರು.

ಹೀಗೆ ಹುಡುಕಾಟ ನಡೆಸುತ್ತಿರುವಾಗ ಬಾಲಕ ಬಂಟ್ವಾಳ ತಾಲೂಕಿನ ಕಲ್ಲಡ್ಕ ಬಳಿ ಸೈಕಲ್ ನಲ್ಲಿ ಹೋಗುತ್ತಿರುವುದು ಪತ್ತೆಯಾಯಿತು. ಸಾರ್ವಜನಿಕರು ವಿಚಾರಿಸಿದಾಗ ಮನೆಯಲ್ಲಿ ತಾಯಿ ಮೊಬೈಲ್ ವಿಷಯದಲ್ಲಿ ಜೋರು ಮಾಡಿ ಬುದ್ಧಿವಾದ ಹೇಳಿದರು. ಈ ಕಾರಣಕ್ಕಾಗಿ ಮನೆ ಬಿಟ್ಟು ಪೆರ್ಲದಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗುತ್ತಿದ್ದೇನೆಂದು ಬಾಲಕ ಹೇಳಿದ. ನಂತರ ಆತನ ಹೆತ್ತವರನ್ನು ಸಂಪರ್ಕಿಸಿ ಅವನನ್ನು ಪೆರ್ಲದ ಅಜ್ಜಿ ಮನೆಯಲ್ಲಿರುವ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. 

ಹೇಗಿದ್ದಾರೆ ನಮ್ಮ ಇಂದಿನ ಮಕ್ಕಳು?  ಹೇಗಿದೆ ಸೋಶಿಯಲ್ ಮೀಡಿಯಾ? 

ಇತ್ತೀಚಿನ ಸುದ್ದಿ

ಜಾಹೀರಾತು