2:14 PM Saturday5 - December 2020
ಬ್ರೇಕಿಂಗ್ ನ್ಯೂಸ್
ಕೊವಾಕ್ಸಿನ್ ಲಸಿಕೆ ಪರೀಕ್ಷೆಗೆ ಗುರಿಯಾಗಿದ್ದ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಗೆ ಕೊರೊನಾ ಸೋಂಕು ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್ ಗೆ ಸಿಬಿಐ ಕೋರ್ಟ್… ಕನ್ನಡ – ಕಾವೇರಿಗೆ ಕರಾವಳಿ ಜಿಲ್ಲೆ ಬಂದ್ ಆಗೋಲ್ಲ:  ದಕ್ಷಿಣ ಕನ್ನಡ, ಉಡುಪಿಯಲ್ಲಿ… ಬೆಳಗಾವಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ

ಇತ್ತೀಚಿನ ಸುದ್ದಿ

ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣ: ಖಾಸಾ ದೋಸ್ತ್ ಹಂತಕನೇ? 

October 21, 2020, 9:30 PM

ಬಂಟ್ವಾಳ(reporterkarnataka news): ತುಳು

ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಸುರೇಂದ್ರ ಅವರ ಖಾಸಾ ದೋಸ್ತಿಯೇ ಕೊಲೆಗೆ ಮುಹೂರ್ತ ಇಟ್ಟನೇ ಎಂಬ ಸಂಶಯ ಪೊಲೀಸರಲ್ಲಿ ಕಾಡಲಾರಂಭಿಸಿದೆ.

ಹತ್ಯೆ ಪ್ರಕರಣದ ತನಿಖೆಗಾಗಿ ಬಂಟ್ವಾಳ ನಗರ, ಗ್ರಾಮಾಂತರ ಮತ್ತು ಬೆಳ್ತಂಗಡಿ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿರುವ ಕುರಿತು ಜಿಲ್ಲಾ ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.

ಮಂಗಳವಾರ ರಾತ್ರಿ 9ರಿಂದ 12 ಗಂಟೆ ಮಧ್ಯೆ ಕೊಲೆ ಕೃತ್ಯ ನಡೆದಿರುವ ಸಾಧ್ಯತೆಯಿದ್ದು, ಇಂದು ಮಧ್ಯಾಹ್ನ ವೇಳೆ ಭಂಡಾರಿಬೆಟ್ಟುನ ಸುರೇಂದ್ರ ಅವರ ಫ್ಲಾಟ್ ನಿಂದ ಗಮಟು ವಾಸನೆ ಬಂದಿರುವ ಮಾಹಿತಿ ಬಂದಿತ್ತು. ಮನೆಯ ಡೋರ್ ಲಾಕ್ ಆಗಿತ್ತು. ಕಿಟಕಿಯಲ್ಲಿ ನೋಡಿದಾಗ, ಮನೆಯೊಳಗೆ ರಕ್ತದ ಕಲೆಗಳು ಕಂಡು ಬಂದಿದ್ದವು. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಸುರೇಂದ್ರ ಹತ್ಯೆಯಾಗಿದ್ದು ಕಂಡು ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಸುರೇಂದ್ರ  ಅವರೊಂದಿಗೆ ಒಬ್ಬ ಫ್ರೆಂಡ್ ಇದ್ದ ಎನ್ನುವ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಹಂತಕ ಯಾರು?: ಸುರೇಂದ್ರ ಬಂಟ್ವಾಳ್ ಅವರ ಫ್ಲಾಟಿಗೆ ಕೆಲವೊಮ್ಮೆ ಗೆಳೆಯನೊಬ್ಬ ಬರುತ್ತಿದ್ದ. ಮಂಗಳವಾರ ರಾತ್ರಿಯೂ 9.30ರ ಸುಮಾರಿಗೆ ಫ್ಲಾಟಿಗೆ ಬಂದಿದ್ದ ಎನ್ನಲಾಗಿದೆ. 

ಸುರೇಂದ್ರ ಬಂಟ್ವಾಳ್ ಕೊಲೆ ಬಹಿರಂಗಗೊಳ್ಳುತ್ತಿದ್ದಂತೆ ಆತನ ಫೋನ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ. ಇದರಿಂದ ಆತನ ಮೇಲಿನ ಸಂಶಯ ಬಲಗೊಂಡಿದೆ. ಯಾವುದಕ್ಕೂ ಪೊಲೀಸ್ ತನಿಖೆಯಿಂದ ಸತ್ಯ ಹೊರ ಬರಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು