ಇತ್ತೀಚಿನ ಸುದ್ದಿ
ಆರ್. ಆರ್. ನಗರದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ
October 27, 2020, 9:09 AM

ಬೆಂಗಳೂರು(reporterkarnataka news): ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರ್. ಆರ್. ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇದುವರೆಗೆ ಶಿರಾ ದಲ್ಲಿ ಮಾತ್ರ ಗಮನ ಹರಿಸಿದ್ದ ಸಿದ್ದರಾಮಯ್ಯ ಇದೀಗ ಆರ್. ಆರ್. ನಗರದಲ್ಲಿ ಕೂಡ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ನಿಖಿಲ್ ಕುಮಾರ ಸ್ವಾಮಿ ಪ್ರಚಾರ ಕೈಗೊಳ್ಳಲಿದ್ದಾರೆ. ಆರ್ .ಆರ್. ನಗರದಲ್ಲಿ ಶಾಂತಿಯುತ ಚುನಾವಣೆ ಖಾತರಿಪಡಿಸಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.