8:25 PM Tuesday1 - December 2020
ಬ್ರೇಕಿಂಗ್ ನ್ಯೂಸ್
ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ರಾಜ್ಯದ 6004 ಗ್ರಾಮ ಪಂಚಾಯಿತಿ ಪೈಕಿ 5762 ಗ್ರಾಪಂಗಳಲ್ಲಿ ನಡೆಯಲಿದೆ ಲೋಕಲ್ ಫೈಟ್  ರಾಜಕೀಯ ಪಕ್ಷ ಸ್ಥಾಪನೆ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಸಭೆ ದಿಲ್ಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಇತ್ತೀಚಿನ ಸುದ್ದಿ

ಟಾಲಿವುಡ್‌ ನಟ ನಟಿಯರೂ ಡ್ರಗ್ಸ್ ಸೇವನೆ : ಶ್ರೀರೆಡ್ಡಿ ಹೊಸ ಬಾಂಬ್

September 15, 2020, 6:40 PM

ಮದ್ರಾಸ್(reporter Karnataka News)

ಭಾರತೀಯ ಸಿನಿಮಾರಂಗದಲ್ಲಿ ಡ್ರಗ್ಸ್ ಮಾಫಿಯಾದ್ದೇ ಚರ್ಚೆ ನಡೆಯುತ್ತಿದೆ. ಸ್ಟಾರ್ ನಟ ನಟಿಯರ ಹೆಸರೂಗಳೂ ಆಚೆ ಬರುತ್ತಿವೆ. ಇದೀಗ ಟಾಲಿವುಡ್​ ಅಂಗಳದಲ್ಲಿ ಹೊಸ ಬಾಂಬ್​ ಹಾಕಲು ಕಾಂಟ್ರವರ್ಸಿಯಲ್​ ನಟಿ ಶ್ರೀರೆಡ್ಡಿ ಮುಂದಾಗಿದ್ದಾರೆ.

‘ಟಾಲಿವುಡ್​ನಲ್ಲಿಯೂ ಸಾಕಷ್ಟು ಸ್ಟಾರ್ ಕಲಾವಿದರು ಡ್ರಗ್​ ಸೇವನೆಯಲ್ಲಿ ಮುಂದಿದ್ದಾರೆ.
ಅವರೆಲ್ಲರ ಪಟ್ಟಿ ನೀಡುತ್ತೇನೆ. ನನಗೆ ಸರ್ಕಾರದಿಂದ ಬೆಂಬಲ ಮತ್ತು ಭದ್ರತೆ ಬೇಕು’ ಎಂದು ಶ್ರೀ ರೆಡ್ಡಿ ಹೊಸ ಬಾಂಬ್​ ಹಾಕಿದ್ದಾರೆ.

‘ಟಾಲಿವುಡ್​ನಲ್ಲಿ ಟಾಪ್​ ನಟ ನಟಿಯರು ಡ್ರಗ್​ ವ್ಯಸನದಲ್ಲಿ ಪಾಲ್ಗೊಂಡಿದ್ದಾರೆ. ಆ ಎಲ್ಲರ ಹೆಸರುಗಳು ನನಗೆ ಗೊತ್ತಿದೆ. ಅವರ ಹೆಸರು ಹೇಳುತ್ತಿದ್ದಂತೆ ನನ್ನ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ತೆಲಂಗಾಣ ಸರ್ಕಾರ ನನಗೆ ಭದ್ರತೆ ನೀಡುವ ಜವಾಬ್ದಾರಿ ಹೊತ್ತರೆ ನಾನು ಪೂರ್ಣ ಪಟ್ಟಿಯನ್ನು ನೀಡುವೆ’ ಎಂದಿದ್ದಾರೆ.

ಅದೇ ರೀತಿ ರಾಕುಲ್​ ಪ್ರೀತ್​ಗೆ ಎನ್​ಸಿಬಿ ವಿಚಾರಣೆಗೆ ಒಳಪಡಿಸಿದರೆ, ಅವರ ಮೂಲಕ ಡ್ರಗ್ ಮಾಫಿಯಾದಲ್ಲಿ ಪಾಲ್ಗೊಂಡ ಸ್ಟಾರ್ ಕಲಾವಿದರ ಬಣ್ಣ ಕಳಚುತ್ತದೆ ಎಂದೂ ಹೇಳಿಕೆ ಕೊಟ್ಟಿದ್ದಾರೆ ಶ್ರೀರೆಡ್ಡಿ. ಈ ಮೊದಲು ಸೌತ್​ ಸ್ಟಾರ್​ಗಳಾದ ನಾಣಿ, ವಿಶಾಲ್, ರಾಘವ್​ ಲಾರೆನ್ಸ್ ಸೇರಿ ಹಲವು ನಟರ ವಿರುದ್ಧ ಕಾಸ್ಟಿಂಗ್​ ಕೌಚ್​ ಕುರಿತು ಆರೋಪ ಮಾಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು