5:53 AM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆ ಸುವರ್ಣ ಮಹೋತ್ಸವ: ಸಂಘಟಕ ವಿಶು ಕುಮಾರ್ ಗೆ ಸನ್ಮಾನ

January 19, 2021, 8:16 AM

ಮಂಗಳೂರು(reporterkarnataka news) :  ದಿ. ಉಸ್ತಾದ್ ಮೋಹನ್ ದಾಸ್ ಮಾಸ್ಟರ್ ಅವರು ಸ್ಥಾಪಿಸಿದ. ಉರ್ವ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆಯ 

ಸುವರ್ಣ ಮಹೋತ್ಸವ ಉರ್ವ ಮೈದಾನದಲ್ಲಿ ನಡೆಯಿತು.

ಶಾಸಕ ವೇದವ್ಯಾಸ ಕಾಮಾತ್ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮೇಯರ್ ದಿವಾಕರ್ ಪಾಂಡೇಶ್ವರ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರಾದ ಕೆ.ರಾಮ ಭಟ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಸ್ಥಳೀಯ ಮನಪಾ ಸದಸ್ಯ ಗಣೇಶ್ ಕುಲಾಲ್, ಬೋಳೂರು ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಚಿತ್ರನಟ ರೂಪೇಶ್ ಶೆಟ್ಟಿ, ಬರ್ಕೆ ಠಾಣೆ ಇನ್‌ಸ್ಪೆಕ್ಟರ್  ಜ್ಯೋತಿರ್ ಲಿಂಗ ಹೊನ್ನಕಟ್ಟಿ, ಬಿಜೆಪಿ ಮುಖಂಡ ರಾಧಾಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ಮಣ್ಣಿನ ಕುಸ್ತಿ ತರಬೇತು ಪಡೆದು ಮಣ್ಣಿನ ಕುಸ್ತಿ ಸ್ಫರ್ದೆಯಲ್ಲಿ ತುಳುನಾಡ ಕುಮಾರ ಪ್ರಶಸ್ತಿ ಪಡೆದ ದ.ಕ.ಜಿಲ್ಲಾ ಕುಸ್ತಿ ಅಸೋಸಿಯೇಶನ್ ನ ಸಂಘಟಕ ವಿಶು ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ರೂವಾರಿಗಳಾದ ಚಂದ್ರಶೇಖರ್ ದೇವಾಡಿಗ ಪೊಳಲಿ ಹಾಗೂ ಶಂಕರಿ ದೇವಾಡಿಗ ಪೊಳಲಿ ಅವರು ಉಪಸ್ಥಿತರಿದ್ದರು.
ಶಿವದೂತೆ ಗುಳಿಗೆ – ನಾಟಕ ಪ್ರದರ್ಶನ: ಸಭಾಕಾರ್ಯಕ್ರಮದ ಬಳಿಕ ಕಲಾಸಂಗಮ ಕಲಾವಿದರಿಂದ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ, ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ” ಎಂಬ ವಿಭಿನ್ನ ಶೈಲಿಯ ತುಳು ನಾಟಕ ಪ್ರದರ್ಶನಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು