ಇತ್ತೀಚಿನ ಸುದ್ದಿ
ಶ್ರೀ ಶೈಲಂ ಭೂಗರ್ಭ ಜಲ ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕ: 8 ಮಂದಿಯ ರಕ್ಷಣೆ
August 21, 2020, 3:09 AM

ಹೈದರಾಬಾದ್(reporterkarnataka news):
ಶ್ರೀ ಶೈಲಂ ಭೂಗರ್ಭ ಜಲ ವಿದ್ಯುತ್ ಕೇಂದ್ರದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದೆ. ಇದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಾಗ ಜಲ ವಿದ್ಯುತ್ ಕೇಂದ್ರದಲ್ಲಿ 17 ಮಂದಿ ಇದ್ದರು ಎಂದು ವರದಿಯಾಗಿದೆ.
ಇದುವರೆಗೆ ಎಂಟು ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ