ಇತ್ತೀಚಿನ ಸುದ್ದಿ
ಶೌರ್ಯ ಕ್ಷಿಪಣಿಯ ಸುಧಾರಿತ ಆವೃತ್ತಿ ಪರೀಕ್ಷೆ ಯಶಸ್ವಿ: 800 ಕಿಮೀ. ದೂರದ ಗುರಿ
October 3, 2020, 2:54 PM

ಬಾಲಸೋರ್(reporterkarnataka news): ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮೆರೆದಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇರುವ ಶೌರ್ಯ ಕ್ಷಿಪಣಿಯ ಹೊಸ ಆವೃತ್ತಿಯ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. 800 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇರುವ ಗುರಿಯನ್ನು ಉಡಾಯಿಸುವ ಶಕ್ತಿಯನ್ನು ಈ ಹೊಸ ಕ್ಷಿಪಣಿ ಹೊಂದಿದೆ.
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಕ್ಷಿಪಣಿ ಅಭಿವೃದ್ಧಿ ಪಡಿಸಿದೆ.
ಈಗಾಗಲೇ ಬಳಕೆಯಲ್ಲಿರುವ ಶೌರ್ಯ ಕ್ಷಿಪಣಿಕ್ಕಿಂತ ಹೊಸ ಕ್ಷಿಪಣಿ ಕಡಿಮೆ ಭಾರ ಹೊಂದಿದೆ.