8:22 AM Wednesday27 - January 2021
ಬ್ರೇಕಿಂಗ್ ನ್ಯೂಸ್
ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿಗಳು ಗುರಿಮುಟ್ಟವಲ್ಲಿ ಮೆಟ್ಟಿಲು ಕಟ್ಟುವ ಮಂಗಳೂರಿನ ಏಕೈಕ ಶ್ಲಾಘ್ಯ ತರಬೇತಿ ಸಂಸ್ಥೆ

November 29, 2020, 3:12 PM

ಮಂಗಳೂರು(reporterkarnataka news): ಸ್ಪರ್ಧಾತ್ಮಕವಾದ ಇಂದಿನ ಯುಗದಲ್ಲಿ ಯುವಜನಾಂಗವು ಬೌದ್ಧಿಕವಾಗಿ ಬಹಳಷ್ಟು ತೀಕ್ಷ್ಣವಾಗಿದ್ದರೂ ತಮ್ಮ ಗುರಿಯನ್ನು ನಿರ್ಧರಿಸುವಲ್ಲಿ ಹಾಗೂ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ. ಈ ವೈಫಲ್ಯತೆಗೆ ಕಾರಣವಾಗುವಂತ ಕೆಲವು ಅಂಶಗಳು ಅಧ್ಯನ ನಡೆಸಿ ಬೋಂದೆಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ಯುವ ಜನಾಂಗಕ್ಕೆ ಒದಗಿಸುವಲ್ಲಿ ಯಶಸ್ವಿಯಾಗಿದೆ.

ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಬಹಳಷ್ಟು ಮಾಹಿತಿಯನ್ನು ದಿನ ನಿತ್ಯ ಕಲೆ ಹಾಕುತ್ತಾರೆ. ಆದರೆ ಅದರಿಂದ ತಮ್ಮ ವಾಸ್ತವದ ಜೀವನಕ್ಕೆ ಹಾಗೂ ತಮ್ಮ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಬೇಕಾಗುವ ಮಾಹಿತಿ ತನ್ನದಾಗಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಸಕಾಲದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಕೂಡ ಎಡವುತ್ತಾರೆ. ಯುವ ಜನಾಂಗದ ಈ ಎಲ್ಲ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡೇ ನುರಿತ ಕಲಿಕಾ ಸಿಬ್ಬಂದಿಗಳ ತಂಡದೊಂದಿಗೆ ಬೋಂದೆಲ್ ನಲ್ಲಿರುವ ಶ್ಲಾಘ್ಯ ಕಾರ್ಯಪ್ರವೃತ್ತವಾಗಿದೆ.

ಶ್ಲಾಘ್ಯ ನಗರದ ಪ್ರದೇಶದ ವಿದ್ಯಾರ್ಥಿಗಳ ಕುರಿತು ಮಾತ್ರವಲ್ಲದೆ ಗ್ರಾಮೀಣ ಭಾಗದ ಮಕ್ಕಳ ಮೇಲೂ ಹೆಚ್ಚಿನ ಫೋಕಸ್ ಮಾಡುತ್ತಿದೆ. ಸಂವಹನಕ್ಕೆ ಬೇಕಾದ ಭಾಷೆಯ ತೊಡಕಿನ ಬಗ್ಗೆಯೂ ಹೆಚ್ಚಿನ ಗಮನ ಕೊಡುತ್ತಿದೆ. ಯುವಜನತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಾದ ಬ್ಯಾಂಕ್, ಎಂಬಿಎ ಪ್ರವೇಶ, ಕ್ಯಾಂಪಸ್ ಆಯ್ಕೆ, ಯುಪಿಎಸ್ಸಿ ಮತ್ತು ಕೆಪಿಎಸ್ ಸಿ ಬರೆಯುವಂತೆ ಪ್ರೋತ್ಸಾಹ ನೀಡುತ್ತಿದೆ ಮಾತ್ರವಲ್ಲದೆ ಸಾಮಾನ್ಯ ವರ್ಗದ ಜನರಿಗೂ ಅನುಕೂಲವಾಗುವ ಶುಲ್ಕದಲ್ಲಿ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳ ಕನಸು ನನಸಾಗಿಸುವತ್ತ ವಿದ್ಯಾರ್ಥಿಗಳ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಿದೆ.

ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಸಮಯದಲ್ಲಿಯೂ ಶ್ಲಾಘ್ಯ ಸಂಸ್ಥೆಯು ಕೈಕಟ್ಟಿ ಕುಳಿತಿಲ್ಲ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿಯೂ ಸಂಸ್ಥೆ  ತನ್ನ ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡಿದೆ. ಹಾಗೆ ವಿದ್ಯಾರ್ಥಿಗಳು ಕೂಡ ತಮ್ಮ  ಬಿಡುವಿನ ಸಮಯವನ್ನು ವ್ಯರ್ಥ ಮಾಡದೆ ದೃಢ ಮನಸ್ಸಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ತಮ್ಮ ಭವಿಷ್ಯವನ್ನು ರೂಪಿಸುವ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡುವಲ್ಲಿ ಶ್ಲಾಘ್ಯ ಯಶಸ್ವಿಯಾಗಿದೆ.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನೆಯಲ್ಲಿಯೆ ತರಬೇತಿಯನ್ನು ಪಡೆಯಬಹುದಾದ ಅನುಕೂಲ ಇರುವುದನ್ನು ಮನಗಂಡ ಸಂಸ್ಥೆಯು ಹಲವು ಆನ್ ಲೈನ್ ತರಬೇತಿ ತರಗತಿಗಳನ್ನು ಗುಣಮಟ್ಟದ ಉಪನ್ಯಾಸಕರ ಮೂಲಕ ನಡೆಸುತ್ತಿದೆ. ಪಿಯುಸಿ, ಪದವಿ ಜತೆಗೆ ಪಿಜಿ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿದೆ.

ಕಠಿಣ ವಿಷಯಗಳ ಸರಳ ಬೋಧನೆ
ಎಂತಹ ಕಠಿಣ ವಿಷಯವನ್ನು ಶ್ಲಾಘ್ಯ ಸಂಸ್ಥೆಯಲ್ಲಿರುವ ಉಪನ್ಯಾಸಕರು ಸರಳ ಬೋಧನೆ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ, ಹೃದಯ ತಟ್ಟುವಂತೆ ಮಾಡುವ ಪ್ರೌಢಿಮೆಯನ್ನು ಹೊಂದಿದ್ದಾರೆ. ಇದರಿಂದಲೇ ಸಂಸ್ಥೆಯು ಕಿರು ಅವಧಿಯಲ್ಲಿ ಅಪಾರ ಮನ್ನಣೆಯನ್ನು ಪಡೆದಿದೆ. ವಿದ್ಯಾರ್ಥಿಗಳು ಆನ್ ಲೈನ್ ತರಗತಿ ಮೂಲಕ ದೇಶದ ಯಾವುದೇ ಮೂಲೆಯಿಂದ ತರಬೇತಿ ಪಡೆಯಬಹುದಾಗಿದೆ.

ಆನ್ ಲೈನ್ ನಲ್ಲೇ ಪರೀಕ್ಷೆ ಗೆಲ್ಲಬಹುದು
ಹೆಚ್ಚಿನ ಯುವ ಜನಾಂಗಕ್ಕೆ ಕಬ್ಬಿಣದ ಕಡಲೆ ಎಂದೆನಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭದಲ್ಲಿ ಪಾಸ್ ಮಾಡುವ ಕುರಿತು ಶ್ಲಾಘ್ಯದಲ್ಲಿ ತರಬೇತಿ ನೀಡಲಾಗುತ್ತದೆ. ಸಂಸ್ಥೆಯು ಈ ನಿಟ್ಟಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿಶಿಷ್ಟವಾದ ಅವಕಾಶವನ್ನೇ ಕಲ್ಪಿಸಿದೆ.

ಯುವಜನತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಾದ ಬ್ಯಾಂಕ್, ಎಂಬಿಎ ಪ್ರವೇಶ, ಕ್ಯಾಂಪಸ್ ಆಯ್ಕೆ, ಯುಪಿಎಸ್ಸಿ ಮತ್ತು ಕೆಪಿಎಸ್ ಸಿ ಬರೆಯುವಂತೆ ಪ್ರೋತ್ಸಾಹ ನೀಡುತ್ತಿದೆ ಮಾತ್ರವಲ್ಲದೆ ಸಾಮಾನ್ಯ ವರ್ಗದ ಜನರಿಗೂ ಅನುಕೂಲವಾಗುವ ಶುಲ್ಕದಲ್ಲಿ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳ ಕನಸು ನನಸಾಗಿಸುವತ್ತ ವಿದ್ಯಾರ್ಥಿಗಳ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು