ಇತ್ತೀಚಿನ ಸುದ್ದಿ
ಶಿವಾಜಿ ಮಹಾರಾಜರ ಶಿವನೇರಿ ಕೋಟೆ ತಲುಪಲು 400 ಮೆಟ್ಟಿಲು ಹತ್ತಿದ ರಾಜ್ಯಪಾಲ !!
August 17, 2020, 11:19 AM

ಮುಂಬೈ(reporterkarnataka news): ಮಹಾರಾಷ್ಟ್ರ ಜನರ ಆರಾಧ್ಯ ದೇವರು ಶಿವಾಜಿಗೆ ಮಹಾರಾಷ್ಟ್ರ ರಾಜ್ಯಪಾಲರಾದ ಬಿ ಎಸ್ ಕೋಶಿಯೇರಿ ಇಂದು ನಮನ ಸಲ್ಲಿಸಿದರು. ಶಿವನೇರಿ ಕೋಟೆಗೆ ಭೇಟಿ ನೀಡಿದ ಅವರು ಛತ್ರಪತಿ ಶಿವಾಜಿಗೆ ನಮನ ಸಲ್ಲಿಸಿದರು. ಛತ್ರಪತಿ ಶಿವಾಜಿ ಅವರ ಜನ್ಮ ಸ್ಥಳ ಇದಾಗಿದೆ. 78ರ ಹರೆಯದ ರಾಜ್ಯಪಾಲ ಕೋಶಿಯೇರಿ ಅವರು ಕೋಟೆಯ 400 ಮೆಟ್ಟಿಲುಗಳನ್ನು 50 ನಿಮಿಷದಲ್ಲಿ ಮುಗಿಸಿದರು. ಶಿವನೇರಿ ಕೋಟೆ ತಲುಪಿದ ಅವರು ನಮನ ಸಲ್ಲಿಸಿದರು.
ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಶಿವನೇರಿ ಕೋಟೆ ಪರಿಸರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು