7:06 AM Tuesday9 - March 2021
ಬ್ರೇಕಿಂಗ್ ನ್ಯೂಸ್
ಸಾಗರಮಾಲಾ ಯೋಜನೆಯ ಕೋಸ್ಟಲ್ ಬರ್ತ್  ರದ್ದುಪಡಿಸಲು ಒತ್ತಾಯಿಸಿ ಬೆಂಗರೆಯಲ್ಲಿ ಪ್ರತಿಭಟನೆ ಮೂಡುಬಿದರೆ: ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಎರಡು ದಿನಗಳ ಶೈಕ್ಷಣಿಕ ಪ್ರವಾಸ, ಚಾರಣ ಮಹಿಳಾ ದಿನಾಚರಣೆ ದಿನದಂದೇ ಶಾಕಿಂಗ್ ನ್ಯೂಸ್: ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ 50 ಟನ್ ಬೂದುಗುಂಬಳ ಬೆಳೆಸಿದ ತೀರ್ಥಹಳ್ಳಿ ರೈತ: ಖರೀದಿಗೆ ಸಗಟು ವರ್ತಕರಿಲ್ಲದೆ ಸೋತ!… ಮಂಗಳೂರಿನ ಸಿಮ್ರಾನ್ ಕೋಚಿಂಗ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ ರಾಜ್ಯ ಬಜೆಟ್ : ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ. 45 ಲಕ್ಷ… ಮಹಿಳೆ ಮತ್ತು ನಾಯಕತ್ವ ಕ್ರೈಸ್ತ ಸಮುದಾಯ ವಿರುದ್ಧ ಸಂಸದ ಪ್ರತಾಪ ಸಿಂಹ ವಿವಾದಿತ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ ಇಂದು ರಾಜ್ಯ ಬಜೆಟ್: ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಥ್ರೋಬಾಲ್ ಪಂದ್ಯಾಟ

ಇತ್ತೀಚಿನ ಸುದ್ದಿ

ದ.ಕ.ಜಿಲ್ಲಾ ಪಂಚಾಯಿತಿ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಣೆ

September 5, 2020, 6:15 PM

ಮಂಗಳೂರು (reporter Karnataka News/ANP)

ಚಿತ್ರ : ಅನುಷ್ ಪಂಡಿತ್

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ. ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬೆಂಗಳೂರು ಉತ್ತರ ವಲಯ, ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವರ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ನಗರದ ಉರ್ವದಲ್ಲಿರುವ ಕೆನರಾ ಹೈಸ್ಕೂಲ್‌ನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಗುರುಗಳ ಪಾತ್ರ ನಮ್ಮ ಜೀವನದಲ್ಲಿ ಅತ್ಯಗತ್ಯ. ಬಾಲ್ಯದ ನಮ್ಮ ಹೀರೊಗಳು ಶಿಕ್ಷಕರು. ಶಿಕ್ಷಕರು ವಿದ್ಯಾರ್ಥಿಯನ್ನು ಹೊರ ಜಗತ್ತಿನಲ್ಲಿ ರೂಪುಗೊಳಿಸುತ್ತಾರೆ.
ಹೆತ್ತವರಿಗಿಂತಲೂ ಶಿಕ್ಷಕರ ಪಾತ್ರ ವಿದ್ಯಾರ್ಥಿಗಳ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರುತ್ತದೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಅದ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ರಾಷ್ಟ್ರ ಪ್ರಶಸ್ತಿ ವಿಜೇತ ಉಸ್ಮಾನ್ ಜಿ. ಸೇರಿದಂತೆ ದ.ಕ.ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಿಲಾಗ್ರಿಸ್ ಹೈಸ್ಕೂಲ್ ನ ಹಿಂದಿಯಭಾಷೆಯ ನಿವೃತ್ತ ಶಿಕ್ಷಕರಾದ ಲಿಲ್ಲಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು