ಇತ್ತೀಚಿನ ಸುದ್ದಿ
ಶಿರಾ ಕ್ಷೇತ್ರ ವ್ಯಾಪ್ತಿಯ ಕಳ್ಳಂಬೆಳ್ಳ ಚೆಕ್ ಫೋಸ್ಟ್ ನಲ್ಲಿ 64 ಲಕ್ಷ ರೂಪಾಯಿ ಅಕ್ರಮ ಹಣ ವಶ
October 29, 2020, 9:04 AM

ಬೆಂಗಳೂರು(reporterkarnataka news): ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಳ್ಳಂಬೆಳ್ಳ ತಪಾಸಣಾ ಠಾಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 64 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಇದೀಗ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಹಣ ಕೊಂಡೊಯ್ಯಲಾಗುತ್ತಿತ್ತು.
ಮತದಾರರಿಗೆ ಹಣ ಹಂಚಲು ಇದನ್ನು ಸಾಗಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ