ಇತ್ತೀಚಿನ ಸುದ್ದಿ
ಶಶಿರಾಜ್ ಕಾವೂರು ಅವರ ಮೂರು ನಾಟಕ ಪುಸ್ತಕಗಳ ಲೋಕಾರ್ಪಣೆ
December 22, 2020, 10:09 AM

ಮಂಗಳೂರು (Reporter Karnataka News)
ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಶಶಿರಾಜ್ ಕಾವೂರು ಅವರ ಮೂರು ನಾಟಕ ಪುಸ್ತಕಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಗರದ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ‘ಸಂಪಿಗೆ ನಗರ ಪೊಲೀಸ್ ಸ್ಟೇಷನ್’ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ದಾಟ್ಸ್ ಆಲ್ ಯುವರ್ ಆನರ್ ಪುಸ್ತಕವನ್ನು ಬಿಡುಗಡೆ ಮಾಡಿದರು.
ಹಿರಿಯ ರಂಗಕರ್ಮಿ ನಾ.ದಾಮೋದರ ಶೆಟ್ಟಿ ‘ಮಿನುಗಲೆ ಮಿನುಗೆಲೆ ನಕ್ಷತ್ರ ಪುಸ್ತಕವನ್ನು ಬಿಡುಗಡೆ ಮಾಡಿದರು.
ರಂಗಭೂಮಿ ನಿರ್ದೇಶಕ ಕಾಸರಗೋಡು ಚಿನ್ನಾ, ಪತ್ರಕರ್ತ ಹಾಗೂ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ರವೀಂದ್ರನಾಥ ಸಿರಿವರ, ರಂಗ ನಿರ್ದೇಶಕ ಮೈಮ್ ರಾಮ್ದಾಸ್, ಗೋಪಾಲ ಶೆಟ್ಟಿ, ಕೆ.ಕೆ. ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.