11:08 AM Wednesday25 - November 2020
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ 

ಇತ್ತೀಚಿನ ಸುದ್ದಿ

ಶಾರದೆಯ ಫೋಟೋ ಶೂಟ್ ಗೆ ಕ್ರಿಶ್ಚಿಯನ್ ಯುವತಿಯ ವ್ರತಾಚರಣೆ !!!

October 26, 2020, 12:52 PM

ಮಂಗಳೂರು (Reporter Karnataka News)

ಕೋವಿಡ್ ಮಹಾಮಾರಿಯ ಪರಿಣಾಮದ ನಡುವೆಯೂ ನವರಾತ್ರಿ ಉತ್ಸವ ಸರಳವಾಗಿ ನಡೆದಿದೆ. ಇದರ ನಡುವೆ ಆನ್‌ಲೈನ್‌ನಲ್ಲೂ ವಿವಿಧ ಸ್ಪರ್ಧೆಗಳು ನಡೆದಿದ್ದು, ಹಲವಾರು ಮಂದಿ ಶಾರದೆಯ ಫೋಟೊಶೂಟ್ ಮಾಡಿಸಿಕೊಂಡಿದ್ದು ವೈರಲ್ ಆಗಿತ್ತು.


ಮಂಗಳೂರಿನ ಕ್ರಿಶ್ಚಿಯನ್ ಯುವತಿಯೋರ್ವಳು ಶಾರದೆಯ ಫೋಟೊ ಶೂಟ್ ಮಾಡಿಕೊಂಡಿದ್ದು, ಅದಕ್ಕಾಗಿ ಆಕೆ 21 ದಿವಸಗಳ ವೃತವನ್ನು ಅಚರಿಸಿದ್ದಾಳೆ.
ಕೆಲವೊಂದು ಕಡೆಗಳಲ್ಲಿ ಫ್ಯಾಶನ್‌ಗಾಗಿ ಶಾರದೆಯ ಫೋಟೊ ಶೂಟ್ ಮಾಡುತ್ತಿದ್ದಾರೆ ಎನ್ನುವ ಆಕ್ರೋಶದ ನುಡಿಗಳು ಕೇಳಿ ಬರುತ್ತಿರುವ ನಡುವೆ ಆಸ್ಥೆಗೆ ದಕ್ಕೆ ಬರದ ಹಾಗೆ ಶಾರದೆಯ ಪ್ರಸಾದನ ಮಾಡಿಕೊಂಡಿದ್ದು ವಿಶೇಷವಾಗಿದೆ.
ನಗರದ ಅನೀಶಾ ಎನ್ನುವ ರೂಪದರ್ಶಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಕ್ರೈಸ್ತೃರೇ ಆದ ಮರ್ಸಿ ಲೇಡಿಸ್ ಸಲೂನ್‌ನ ಮರ್ಸಿ ವೀಣಾ ಡಿಸೋಜಾ ನೇತೃತ್ವದಲ್ಲಿ ಪ್ರಸಾದನ ನಡೆದಿತ್ತು.

ಪಾತ್‌ವೇ ಎಂಟರ್‌ಪ್ರೈಸಸ್‌ನ ದೀಪಕ್ ಗಂಗೂಲಿ ಸಂಯೋಜನೆಯಲ್ಲಿ ಛಾಯಾಗ್ರಾಹಕ ವರ್ಷಿಲ್ ಅಂಚನ್ ಕೈಚಳಕದಲ್ಲಿ ಈ ಫೋಟೊ ಶೂಟ್ ನಡೆದಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು