ಇತ್ತೀಚಿನ ಸುದ್ದಿ
50 ಲಕ್ಷ ವೆಚ್ಚದಲ್ಲಿ ಶಕ್ತಿನಗರ ಕೊಡಂಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
September 15, 2020, 5:16 PM

ಮಂಗಳೂರು(reporterkarnataka news): ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಶಕ್ತಿನಗರ ಕೊಡಂಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಕ್ತಿನಗರದ ಕೊಡಂಗೆ ರಸ್ತೆಯು ಬಹುತೇಕ ಹಾಳಾಗಿದೆ. ಹಾಗಾಗಿ ಲೋಕೋಪಯೋಗಿ ಇಲಾಖೆಯ ಮೂಲಕ ಮುಖ್ಯಮಂತ್ರಿ ವಿಶೇಷ ನಿಧಿಯಿಂದ 50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲೂ ಕೂಡ ಹಲವಾರು ಕಾಮಗಾರಿಗಳು ನಡೆಯುತ್ತಿವೆ. ಕೋವಿಡ್ ಕಾರಣದಿಂದ ಕಾರ್ಮಿಕರ ಕೊರತೆಯಿದೆ. ಆದರೂ ಕೂಡ ಸಾರ್ವಜನಿಕರ ಅಗತ್ಯತೆಯ ಕಾರಣ ಸಾಧ್ಯವಾಗಷ್ಟು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅದ್ಯಕ್ಷ ಜಗದೀಶ್ ಶೆಟ್ಟಿ ಬೋಳೂರು, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷರಾದ ಪೂರ್ಣಿಮಾ, ಪಾಲಿಕೆ ಸದಸ್ಯರಾದ ವನಿತಾ ಪ್ರಸಾದ್, ಶಕಿಲಾ ಕಾವಾ, ಬಿಜೆಪಿ ಮುಖಂಡರಾದ ಪ್ರಸಾದ್, ರವಿಚಂದ್ರ, ಗೋಪಾಲ ಶೆಣೈ, ಪುರುಷೋತ್ತಮ ಭಟ್, ವಿಜಯ್ ಶೆಣೈ, ಅಶೋಕ್, ರವಿಚಂದ್ರ, ಶೋಭಾ ಕಂಡೆಟ್ಟು, ಜಗದೀಶ್ ರೈ, ದಿನೇಶ್ ರೈ, ಶ್ರೀ ರಾಮ್, ಮೋಹನ್, ಮಿತೇಶ್, ಲತಾ, ಬಾಲಕೃಷ್ಣ, ಅಭಿಷೇಕ್, ರವೀಂದ್ರ, ರಮ್ಯ, ಸುಮನ, ಜನಾರ್ದನ್ ಭಟ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.