7:27 PM Wednesday25 - November 2020
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಭೃಂಗೀಶ್ ನೇಮಕ ಡಿಸೆಂಬರ್ 5 ರಾಜ್ಯ ಬಂದ್:  ಕನ್ನಡ ಪರ ಸಂಘಟನೆಗಳ ಸಭೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶ್ರೀರಾಮುಲು ಭೇಟಿ ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ

ಶಕ್ತಿನಗರ  ಮುಖ್ಯ ರಸ್ತೆಯ ಮಹಾಕಾಳಿ ಜಂಕ್ಷನ್ ನಿಂದ ವಾಹನ ಸಂಚಾರ ನಿಷೇಧಿಸಿ ತಾತ್ಕಾಲಿಕ ಬದಲಾವಣೆ

November 13, 2020, 8:38 AM


ಮಂಗಳೂರು(reporterkarnatakanews): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವು ಸೆಂಟ್ರಲ್ 35ನೇ ವಾರ್ಡ್ ಶಕ್ತಿನಗರ ಮುಖ್ಯ ರಸ್ತೆಯ ಮಹಾಕಾಳಿ ಜಂಕ್ಷನ್ ನಿಂದ ಶಕ್ತಿನಗರ ಸ್ಮಶಾನ ದ್ವಾರದವರೆಗೆ 250.00 ಮೀ. ಉದ್ದಕ್ಕೆ ರಸ್ತೆ ಅಭಿವೃದ್ಧಿಪಡಿಸಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಯನ್ನು ಪ್ರಾರಂಭಿಸಲು ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರೀಕ್ಟ್ ಮೆಜಿಸ್ಟ್ರೇಟ್ ವಿಕಾಶ್ ಕುಮಾರ್ ವಿಕಾಶ್ ಆದೇಶ ಹೊರಡಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1989 ರ ನಿಯಮ 221 ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶಕ್ತಿನಗರ ಮುಖ್ಯ ರಸ್ತೆ ಮಹಾಕಾಳಿ ಜಂಕ್ಷನ್ ನಿಂದ ಶಕ್ತಿನಗರ ಸ್ಮಶಾನ ದ್ವಾರದವರೆಗೆ ಪ್ರಸ್ತುತ ಸಾಲಿನನವೆಂಬರ್ 12 ರಿಂದ  2021ನೇ ಸಾಲಿನ ಜನವರಿ 10 ರವರೆಗೆ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.
ಶಕ್ತಿನಗರ ಕ್ರಾಸ್ ನಿಂದ ಸ್ಮಶಾನ ರಸ್ತೆಯಾಗಿ ಕಂಡೆಟ್ಟು ಬಿಕರ್ನಕಟ್ಟೆ ಕ್ರಾಸ್ ಕಡೆಗೆ ಸಂಚರಿಸುವ ಎಲ್ಲಾ  ವಾಹನಗಳನ್ನು ಶಕ್ತಿನಗರ ಸ್ಮಶಾನದ ಬಳಿ ನಿಷೇಧಿಸಲಾಗಿದೆ.ಬಿಕರ್ನಕಟ್ಟೆ ಕ್ರಾಸ್, ಕಂಡೆಟ್ಟು ಪಾಂಡುರಂಗ ಭಜನಾ ಮಂದಿರದಿಂದ ಸ್ಮಶಾನ ರಸ್ತೆಯಾಗಿ ಶಕ್ತಿನಗರ ಕ್ರಾಸ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳಿಗೆ ಅವಕಾಶ ನೀಡಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.ಮೇಲಿನ ಈ ನಿರ್ಬಂಧನೆಗಳು,ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು