10:39 AM Friday4 - December 2020
ಬ್ರೇಕಿಂಗ್ ನ್ಯೂಸ್
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ… ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ

ಇತ್ತೀಚಿನ ಸುದ್ದಿ

ಶಬರಿಮಲೆ ದರ್ಶನ: ಹೊರ ರಾಜ್ಯದ ಭಕ್ತರ ಸಂಖ್ಯೆಗೆ ನಿಯಂತ್ರಣ ಹೇರಲು ಚಿಂತನೆ

September 29, 2020, 8:58 AM

ತಿರುವನಂತಪುರಂ(reporterkarnataka news): ಶಬರಿಮಲೆ ದೇವಸ್ಥಾನದಲ್ಲಿ  ಮಂಡಲ ಪೂಜೆ ಮತ್ತು ಮಕರ ವಿಳಕಂ ಸಂದರ್ಭದಲ್ಲಿ ಭಕ್ತರ ಪ್ರವೇಶದ ವಿಚಾರದಲ್ಲಿ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಎಷ್ಟು ಭಕ್ತರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ  ಮುಖ್ಯ ಕಾರ್ಯದರ್ಶಿ ನಿರ್ಧರಿಸಲಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.

ದೇವಸ್ಥಾನಕ್ಕೆ ಬರುವ ಎಲ್ಲ ಅಯ್ಯಪ್ಪ ಭಕ್ತರು ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು. ದೇವಸ್ಥಾನದ ಪರಿಸರದಲ್ಲಿ ಮತ್ತೆ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಕ್ತರು ದೇವರ ದರ್ಶನ ಮಾಡಿದ ಕೂಡಲೇ ದೇವಸ್ಥಾನದಿಂದ ನಿರ್ಗಮಿಸಬೇಕು. ಅಲ್ಲಿ ತಂಗಬಾರದು ಎಂಬ  ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು