ಇತ್ತೀಚಿನ ಸುದ್ದಿ
ಶಾಲೆ ಆರಂಭಕ್ಕೆ ಆರೋಗ್ಯ ಇಲಾಖೆ ನಕಾರ
August 9, 2020, 4:00 AM

ಹೊಸದಿಲ್ಲಿ(reporterkarnataka):ಸೆಪ್ಟೆಂಬರ್1ರಿಂದ ದೇಶಾದ್ಯಂತ ಶಾಲೆಗಳನ್ನು ಪುನರಾರಂಭಿಸುವ ಚಿಂತನೆಗೆ ಕೇಂದ್ರ ಆರೋಗ್ಯ ಇಲಾಖೆ ಸಹಮತ ವ್ಯಕ್ತಪಡಿ ಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮಾನವ ಸಂಪದಭಿವೃದ್ಧಿ ಇಲಾಖೆ ಸೆ. 1ರಿಂದ ಶಾಲೆ ಆರಂಭಿಸುವ ಬಗ್ಗೆ ಒಲವು ವ್ಯಕ್ತಪಡಿಸಿತ್ತು. ಆದರೆ ಆ 30ರ ಹೊತ್ತಿಗೆ ಕೊರೊನಾ ಪೀಡಿತರ ಸಂಖ್ಯೆ 30 ಲಕ್ಷ ಮುಟ್ಟಲಿದೆ. ಹಾಗಾಗಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಯನ್ನು ನೋಡಿಕೊಂಡು ಶಾಲೆಗಳನ್ನು ಆರಂಭಿಸಬೇಕು ಎಂಬ ಅಭಿಪ್ರಾಯವನ್ನು ಆರೋಗ್ಯ ಇಲಾಖೆ ಹೊಂದಿದೆ. ವಿದೇಶಗಳಲ್ಲಿ ಶಾಲೆ, ಕಾಲೇಜು ಪುನರಾರಂಭಿಸಿದ ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೊರೊನಾ ಸೋಂಕು ತಗಲಿದ್ದರಿಂದ ಶಾಲೆಗಳನ್ನು ಮತ್ತೆ ಮುಚ್ಚಲಾಯಿತು ಎಂದು ಸಚಿವಾಲಯ ಹೇಳಿದೆ.