ಇತ್ತೀಚಿನ ಸುದ್ದಿ
ಸಂವಿಧಾನ ಓದು ಆನ್ ಲೈನ್ ಕಾರ್ಯಾಗಾರ
September 12, 2020, 4:39 PM

ಮಂಗಳೂರು(reporterkarnatakanews):
ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಎನ್. ಎಸ್. ಎಸ್. ಕೋಶ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಶುಕ್ರವಾರ ಸಂವಿಧಾನ ಓದು ಆನ್ ಲೈನ್ ಕಾರ್ಯಗಾರ ಜರುಗಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್ ಎಡಪಡಿತ್ತಾಯ ಉದ್ಘಾಟಿಸಿದರು.
ಅವರು ಮಾತನಾಡಿ ಪ್ರತಿಯೊಂದು ಮನೆಯಲ್ಲೂ ಸಂವಿಧಾನ ಇರಬೇಕು. ಭಾರತದ ಧರ್ಮ ಗ್ರಂಥ ಸಂವಿಧಾನ.ಇದನ್ನು ಅರ್ಥೈಸಿ ಕೊಳ್ಳಬೇಕಾದರೆ ಭಾರತದ ಇತಿಹಾಸವನ್ನು ಮೊದಲು ಅಥೈಸಿ ಕೊಳ್ಳಬೇಕು. ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ, ಕಾನೂನಿನ ಮೂಲ ಆಧಾರ ಸಂವಿಧಾನ.ಇತಿಹಾಸ ಮರೆತ ವ್ಯಕ್ತಿ ಇತಿಹಾಸ ಸೃಷ್ಟಿಲಾರ, ಸಂವಿಧಾನ ಸಾವಿರ ಕಂಬದ ಚಪ್ಪರ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ರಾಜ್ಯ ಶಾಸ್ತ್ರ ಪ್ರಾದ್ಯಾಪಕ ಡಾ. ದಯಾನಂದ ನಾಯಕ್ ಮಾತನಾಡಿ ಸಂವಿಧಾನಕ್ಕೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ. ನಾವೆಲ್ಲರೂ ಒಂದಾಗಿ ಮೂಲಭೂತ ಹಕ್ಕುಗಳನ್ನು ಮನಮುಟ್ಟುವಂತೆ ತಿಳಿಸಬೇಕಾದ ಅಗತ್ಯತೆಯನ್ನು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಸಿದ್ದಾಪುರ ಎನ್.ಜಿ. ಸಿ ಮಹಾ ವಿದ್ಯಾಲಯ ಕಾರ್ಯದರ್ಶಿ, ಸಹಯಾನ, ಪ್ರಾದ್ಯಾಪಕ, ಡಾ.ವಿಠ್ಠಲ ಭಂಡಾರಿ ಮಾತನಾಡಿ ಮೀಸಲಾತಿ ಭಿಕ್ಷೆ ಯಲ್ಲ.ಅದು ಹಕ್ಕು. ಭಾರತದ ನೋವನ್ನು ದೇಶದ ಎದುರಿಗೆ ಇಟ್ಟವರು ಡಾ.ಬಿ. ಆರ್ ಅಂಬೇಡ್ಕರ್, ನಾವು ಅವರನ್ನು ಅನು ಸಂಧಾನ ಮಾಡಬೇಕಾಗಿದೆ. ಎಂದರು.
ಸಂಪನ್ಮೂಲ ವ್ಯಕ್ತಿ ಯಾಗಿ ಹಾಸನ, ಗೃಹ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕಿ ಪಿ.ಭಾರತಿ ದೇವಿ ಮಾತನಾಡಿ ಸಂವಿಧಾನ ಕಾನೂನಿನ ಪ್ರಕಾರ ಸಮಾನತೆ ದೊರಕಿದರೆ ಸಾಲದು ಸಾಮಾಜಿಕವಾಗಿ ದೊರೆಯಬೇಕು.ಮಹಿಳೆಗೆ ವಿಧಿಸಿದ್ದ ಕಟ್ಟು ಪಾಡುಗಳ ಬಗ್ಗೆ ವಿವರಿಸಿ, ಮಹಿಳೆಗೆ ಎಲ್ಲ ವಿಧದಲ್ಲೂ ಸಮಾನತೆ ನೀಡಬೇಕು. ನಾವೆಲ್ಲರೂ ಸಂವಿಧಾನದ ವಿದ್ಯಾರ್ಥಿಗಳು ಎಂದು ಹೇಳಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಂಗಳೂರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎಚ್.ಎನ್.ನಾಗ ಮೋಹನ್ ದಾಸ್ ಮಾತನಾಡಿ ಈ ಸಂವಿಧಾನ ದಿಂದ ನಾವು ಬಹಳಷ್ಟು ಅಭಿವೃದ್ಧಿ ಕಂಡಿದ್ದೇವೆ.ಅನೇಕ ಜಾತಿ ಮತ ಗಳಿದ್ದರೂ ಭಾರತೀಯರಿಗೆ ಪವಿತ್ರವಾದದ್ದು ಸಂವಿಧಾನ. ಕೆಲವರು ಸಂವಿಧಾನಕ್ಕೆ ಎದುರಿನಲ್ಲಿ ಕೈ ಮುಗಿದು ಹಿಂದಿನಿಂದ ತುಳಿಯುತ್ತಾರೆ.ಭಾರತ ಸಂವಿಧಾನವನ್ನು ಬೆಳೆಸಿ, ಉಳಿಸಿ, ಗೌರವಿಸಿ.
ಸಂವಿಂಧಾನವನ್ನು ಓದಿ ಅರ್ಥೈಸಿಕೊಳ್ಳಿ. ಶಿಕ್ಷಕರು ಮೊದಲು ಸಂವಿಂಧಾನವನ್ನು ಸರಿಯಾಗಿ ತಿಳಿದು ಕೊಳ್ಳಿ ಆಮೇಲೆ ನಿಮ್ಮ ವಿದ್ಯಾರ್ಥಿಗಳಿಗೆ ಹೇಳಿ ಕೋಡಿ ಎಂದು ಅವರು ಹೇಳಿದರು.
ರಾಜ್ಯ ಎನ್. ಎಸ್.ಎಸ್.ಅಧಿಕಾರಿ ಡಾ.ಗಣನಾಥ ಎಕ್ಕಾರ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸಂವಿಂಧಾನದ ಮೂಲ ಆಶಯ ವಿವೇಕಾನಂದರ ಮಾತಿನಲ್ಲಿ ಇದೆ. ಭಾರತ ಪ್ರಗತಿ ಸಾಧಿಸಿದ್ದರೆ ಅದು ಸಂವಿಂಧಾನದ ಮುಖಾಂತರ ಎಂದರು.

ಎನ್. ಎಸ್.ಎಸ್ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಜೋಗಿ ಸಮಾರೋಪ ಭಾಷಣ ಮಾಡಿದರು.
ಜಾನಪದ ವಿಶ್ವವಿದ್ಯಾನಿಲಯ ಗೋಟ ಗೋಡಿ, ಸಂವಿಧಾನ ಓದು ಅಭಿಯಾನ ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ಮಾನ್ಪಡೆ ಕಾರ್ಯಕ್ರಮದಲ್ಲಿ ಉಪಸ್ಥತಿತರಿದ್ದರು.
ನೋಡಲ್ ಅಧಿಕಾರಿ ಗಳಾದ, ದೇವಿ ಪ್ರಸಾದ್, ವಿಧ್ಯಾ, ವನಿತ್ ಕುಮಾರ್ ಭಾಗವಹಿಸಿದ್ದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಕಾರ್ಯ ಕ್ರಮ ಆಯೋಜಿಸಿದ್ದರು.