10:48 PM Sunday7 - March 2021
ಬ್ರೇಕಿಂಗ್ ನ್ಯೂಸ್
ಸೆಕ್ಸ್ ಸಿಡಿ ಪ್ರಕರಣ: ಯುವತಿಯ ವಿಚಾರಣೆಗೆ ಮುನ್ನವೇ ದೂರು ವಾಪಸ್ ಪಡೆಯಲು ಕಲ್ಲಹಳ್ಳಿ… ‘ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಅಭಿಯಾನ: ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಇಳಿದು ತ್ಯಾಜ್ಯ ತೆರವು ಕುಂಬಳ ಕಾಯಿ ಕಳ್ಳ ಗಾದೆ: ಸೆಕ್ಸ್ ಸಿಡಿ ಬಳಿಕ ತಡೆಯಾಜ್ಞೆ ಕೋರುವ ಸಚಿವರ ಸಂಖ್ಯೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ದೆಹಲಿ ಖಾಸಗಿ ಆಸ್ಪತ್ರೆಗೆ ಸಂಸದ ಅನಂತ ಕುಮಾರ್ ಹೆಗಡೆ ದಾಖಲು: ಕಾಲಿಗೆ ಶಸ್ತ್ರ… ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ…

ಇತ್ತೀಚಿನ ಸುದ್ದಿ

ಶಿರಾ ಶಾಸಕ ಬಿ. ಸತ್ಯನಾರಾಯಣ ಇನ್ನಿಲ್ಲ

August 4, 2020, 7:37 AM

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಅವರು ಶಿರಾದ ಶಾಸಕರಾಗಿದ್ದರು.

ಸತ್ಯನಾರಾಯಣ ಅವರು ಕಳೆದ ಕೆಲ ವರ್ಷಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 12.20 ರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ. “ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಶ್ರೀ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ.
ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇಇಲ್ಲ. ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೀನಿ, ಎಂದು ದೇವೇಗೌಡ ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು