12:28 AM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಸತ್ಯಾ ಕೆ., ದುರ್ಗಾ ಕುಮಾರ್, ಬದರಿ ಪುರೋಹಿತ್ ಗೆ  ರಾಜೇಶ ಶಿಬಾಜೆ ಮಾಧ್ಯಮ ಗೌರವ ಪ್ರಶಸ್ತಿ

November 17, 2020, 8:33 PM

ಮಂಗಳೂರು(reporterkarnataka news):ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಿ.ರಾಜೇಶ ಶಿಬಾಜೆ ಅವರ ಹೆಸರಲ್ಲಿ ನೀಡಲಾಗುತ್ತಿರುವ ಮಾಧ್ಯಮ ಗೌರವ ಪ್ರಶಸ್ತಿಗೆ ವಾರ್ತಾಭಾರತಿ ಪತ್ರಿಕೆಯ ಹಿರಿಯ ವರದಿಗಾರ್ತಿ ಸತ್ಯಾ ಕೆ. ಮಂಗಳೂರು,  ಸುದ್ಧಿ ಚಾನಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‍ಕೆರೆ ಮತ್ತು ವ್ಯಂಗ್ಯ ಚಿತ್ರಕಾರ ಬದರಿ ಪುರೋಹಿತ್ ಕೊಪ್ಪಳ ಅವರು ಆಯ್ಕೆಯಾಗಿದ್ದಾರೆ.

ಪತ್ರಕರ್ತರ ವೇದಿಕೆ ಬೆಂಗಳೂರು ನೀಡುವ ಈ ಗೌರವಕ್ಕೆ ಮೂರು ವರ್ಷದಲ್ಲಿ ಮೂರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ಅವರು ತಿಳಿಸಿದ್ದಾರೆ. 

30ಕ್ಕೂ ಹೆಚ್ಚು ಪತ್ರಕರ್ತರ ಹೆಸರನ್ನು ಸಮಿತಿಯು ಪರಿಗಣಿಸಿ ಅಂತಿಮವಾಗಿ ಈ ಆಯ್ಕೆ ನಡೆಸಿದೆ.

ಸತ್ಯಾ ಕೆ. ಮಂಗಳೂರು: ಪತ್ರಿಕೋದ್ಯಮವನ್ನು ಉಸಿರಾಗಿಸಿಕೊಂಡು ವಾರ್ತಾಭಾರತಿ ಪತ್ರಿಕೆಯಲ್ಲಿ ಮಾನವೀಯ ಮತ್ತು ವಿಶೇಷ ವರದಿಯ ಮೂಲಕ ಗಮನಸೆಳೆಯುತ್ತಿರುವ ಸತ್ಯಾ ಅವರು ಬಿಕಾಂ ಪದವಿಧರೆ. ಜನವಾಹಿನಿಯಲ್ಲಿ ಒಂದೂವರೆ ವರ್ಷ ತರಬೇತಿ ಪಡೆದು ಅದೇ ಪತ್ರಿಕೆಯಲ್ಲಿ ಮೂರು ವರ್ಷ ಉಪಸಂಪಾದಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ 18 ವರ್ಷಗಳಿಂದ ಉಪ ಸಂಪಾದಕಿಯಾಗಿ, ಜಿಲ್ಲಾ ವರದಿಗಾರ್ತಿಯಾಗಿ, ಈಗ ಹಿರಿಯ ವರದಿಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಮಾನವೀಯ ಕಳಕಳಿಯ ವರದಿಗಳು ವಿಶೇಷ ವರದಿಗಳಿಗೆ ಆದ್ಯತೆ ನೀಡುತ್ತಾ ಬೆಳೆದು ಕರಾವಳಿಯ ಪ್ರಮುಖ ಪತ್ರಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.

ದುರ್ಗಾಕುಮಾರ್ ನಾಯರ್‍ಕೆರೆ: ಕಳೆದ ಇಪ್ಪತ್ತೈದು ವರ್ಷಗಳಿಂದ ಸುಳ್ಯದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ದುರ್ಗಾಕುಮಾರ್ ನಾಯರ್‍ಕೆರೆಯವರು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಹೆಸರು ಮಾಡಿದ್ದಾರೆ

ವೃತ್ತಿಯಲ್ಲಿ ಪತ್ರಕರ್ತರಾಗಿ, ಪ್ರವೃತ್ತಿಯಿಂದ ಸಂಶೋಧನೆ, ಸಾಹಿತ್ಯ, ಸಂಘಟನೆ ಹೀಗೆ ಕ್ರಿಯಾಶೀಲರಾಗಿರುವ ಅವರು, ಪ್ರಸ್ತುತ ಸುದ್ದಿ ಚಾನೆಲ್ ಹಾಗೂ ಸುದ್ದಿ ನ್ಯೂಸ್ ವೆಬ್ ಸೈಟ್ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕನ್ನಡ ಪ್ರಭ ಪತ್ರಿಕೆಯ ಸುಳ್ಯದ ವರದಿಗಾರರೂ ಆಗಿದ್ದಾರೆ.

ತನ್ನ ಸೃಜನಶೀಲ ಬರವಣಿಗೆಗಳಿಂದ ಪತ್ರಿಕಾ ರಂಗದಲ್ಲಿ ಹೊಸ ಛಾಪು ಮೂಡಿಸಿ ಜನಪ್ರಿಯರಾದ ದುರ್ಗಾಕುಮಾರ್ ಅವರು ತನ್ನ ಚಿಂತನಶೀಲ ಬರಹ ಹಾಗೂ ವಿಚಾರ ಪ್ರಚೋದಕ ಮಾತುಗಳಿಂದ ಗಮನ ಸೆಳೆಯುತ್ತಿದ್ದಾರೆ.

ಸುಮಾರು ಎರಡು ಸಾವಿರಕ್ಕೂ ಅಧಿಕ ಗ್ರಾಮೀಣ ಅಭಿವೃದ್ದಿ, ಸಮಸ್ಯೆ , ಮಾನವೀಯ ಸಂಗತಿ ಹಾಗೂ ಇತರ ವಿಶೇಷ ಲೇಖನಗಳನ್ನು ಬರೆದಿದ್ದಾರೆ. ಹತ್ತಕ್ಕೂ ಅಧಿಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದು, ನೂರಾರು ಗ್ರಾಮೀಣ ಭಾಗದ ವಿಶೇಷ ಸ್ಟೋರಿಗಳನ್ನು ದೃಶ್ಯ ಮಾಧ್ಯಮದ ಮೂಲಕವೂ ಬೆಳಕಿಗೆ ತಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಅಭಿವೃದ್ದಿ, ಅಭ್ಯುದಯ ಪತ್ರಿಕೋದ್ಯಮದ ಸಾಧನೆ ಮಾಡಿದ್ದಾರೆ. 

ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ಅಧ್ಯಯನ ನಿರತರಾಗಿರುವ ಅವರು ಸ್ಮರಣ ಸಂಚಿಕೆ, ಅಭಿನಂದನಾ ಗ್ರಂಥಗಳ ಪ್ರಧಾನ ಸಂಪಾದಕರಾಗಿ, ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸುಳ್ಯದಲ್ಲಿ ರಾಜ್ಯಮಟ್ಟದ ಪತ್ರಿಕೋದ್ಯಮ ಶಿಬಿರ, ಸುಬ್ರಹ್ಣಣ್ಯದಲ್ಲಿ ರಾಜ್ಯಮಟ್ಟದ ಕಥಾ ಕಮ್ಮಟ ಇವರ ಉಸ್ತುವಾರಿಯಲ್ಲಿ ನಡೆದಿದೆ. 

ರಾಜ್ಯ ಇಂದಿರಾ ಪ್ರಿಯದರ್ಶಿ ಪ್ರಶಸ್ತಿ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ಭಾರತೀಯ ಜೇಸೀಸ್ ವಲಯ 15ರ ಸಾಧನಾ ಶ್ರೀ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಿರಿ ಪ್ರಶಸ್ತಿ ಪ್ರಶಸ್ತಿ ದೊರಕಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ದುಡಿದ ದುರ್ಗಾಕುಮಾರ್, “ತುಳು ದರ್ಶನ” ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಬದರಿ ಪುರೋಹಿತ ಕೊಪ್ಪಳ: ಸುಮಾರು 15 ವರ್ಷಗಳಿಂದ ಚಿತ್ರಕಲೆ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ರಾಜ್ಯದ ಪ್ರಮುಖ ವ್ಯಂಗ್ಯ ಚಿತ್ರಕಾರರಾಗಿ ಗುರುತಿಸಲ್ಪಟ್ಟಿದ್ದಾರೆ. ನಗೆ ಮುಗುಳು ಹಾಸ್ಯ ಪತ್ರಿಕೆಯ ರಾಜ್ಯದ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಪ್ರಥಮ 2017, ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ವ್ಯಂಗ್ಯಚಿತ್ರ ಚಿತ್ರಕಲಾ ರತ್ನ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ. ಬೆಂಗಳೂರು ಮೀಡಿಯಾಕ್ಲಬ್‍ನಿಂದ ಹೂಗಾರ ಮಾಧ್ಯಮ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.

ಬೆಂಗಳೂರಲ್ಲಿ ಹತ್ತಕ್ಕು ಹೆಚ್ಚು ಬಾರಿ ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ಮೈಸೂರು, ಬಳ್ಳಾರಿ ಧಾರವಾಡ ಸೇರಿದಂತೆ ಆಂಧ್ರಪ್ರದೇಶದ, ಗೋವಾ, ದೆಹಲಿಯಲ್ಲಿ ಕನ್ನಡ ವ್ಯಂಗ್ಯಚಿತ್ರ  ಪ್ರದರ್ಶನ . ಕನ್ನಡದ ಪ್ರಮುಖ ದಿನಪತ್ರಿಕೆ ಗಳಾದ ಪ್ರಜಾವಾಣಿ, ಉದಯವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ. ವಿಜಯ ಕರ್ನಾಟಕ, ವಿಶ್ವವಾಣಿಗಳಲ್ಲಿ ವ್ಯಂಗ್ಯಚಿತ್ರ ಪ್ರಕಟವಾಗಿದೆ. ಸುಧಾ, ತರಂಗ, ಕರ್ಮವೀರ ವಾರಪತ್ರಿಕೆಗಳಲ್ಲೂ ವ್ಯಂಗ್ಯಚಿತ್ರ ನಿಯಮಿತ ಪ್ರಕಟವಾಗುತ್ತಿವೆ.

ಇತ್ತೀಚಿನ ಸುದ್ದಿ

ಜಾಹೀರಾತು